ಗುರುವಾರ , ನವೆಂಬರ್ 21, 2019
22 °C

29ಕ್ಕೆ ಅಂತರ್ ಜಿಲ್ಲಾ ಅಂಧರ ಚೆಸ್ ಪಂದ್ಯಾವಳಿ

Published:
Updated:

ತುಮಕೂರು: ಪ್ರೇರಣ ಅಂಗವಿಕಲರ ಕ್ಷೇಮಾಭಿವೃದ್ಧಿ ಟ್ರಸ್ಟ್ ಸೆ.29ರಂದು ಬೆಳಿಗ್ಗೆ 9.30ಕ್ಕೆ ನಗರದ ಬಾರ್‌ಲೈನ್ ರಸ್ತೆಯ ಚಿಲುಮೆ ಪೊಲೀಸ್ ಸಮುದಾಯ ಭವನದಲ್ಲಿ ಅಂತರ್ ಜಿಲ್ಲಾ ಮಟ್ಟದ ಅಂಧರ ಮತ್ತು ಮುಕ್ತ ರಾಫಿಡ್ ಚೆಸ್ ಪಂದ್ಯಾವಳಿ ಹಮ್ಮಿಕೊಂಡಿದೆ.

ಅಂಧರ ವಿಭಾಗದಲ್ಲಿ ಮೊದಲ ಮೂರು ಮಂದಿಗೆ ನಗದು ಹಾಗೂ ಪಾರಿತೋಷಕ, 4 ರಿಂದ 15 ರವರೆಗೆ ನಗದು ಬಹುಮಾನ, ಅತ್ಯುತ್ತಮ ಸ್ಪರ್ಧಿಗೆ  ಪಾರಿತೋಷಕ ನೀಡಲಾಗುತ್ತದೆ. ಮುಕ್ತ ವಿಭಾಗದಲ್ಲಿ ಮೊದಲ ಮೂರು ಮಂದಿಗೆ ನಗದು ಹಾಗೂ ಪಾರಿತೋಷಕ, 4 ರಿಂದ 15 ರವರೆಗೆ ನಗದು ಬಹುಮಾನ ಹಾಗೂ ಪಾರಿತೋಷಕ ಇರಲಿದೆ.

ಅತಿ ಹಿರಿಯ ಸ್ಪರ್ಧಿಗೆ ನಗದು ಮತ್ತು ಅತಿ ಕಿರಿಯ ಸ್ಪರ್ಧಿಗೆ ಪಾರಿತೋಷಕ ನೀಡಲಾಗುತ್ತದೆ. ಅಂಧ ಮತ್ತು ದೈಹಿಕ ಅಂಗವಿಕಲ ಸ್ಪರ್ಧಿಗಳಿಗೆ ಪ್ರವೇಶ ಶುಲ್ಕ ಇಲ್ಲ. ಮಕ್ಕಳ ವಯೋಮಾನದ ಸ್ಪರ್ಧೆಗೆ ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ ಮಾತ್ರ ನೀಡಲಾಗುತ್ತದೆ.

ಮುಕ್ತ ಮತ್ತು ಮಕ್ಕಳ ವಯೋಮಾನದ ಸ್ಪರ್ಧಿಗಳಿಗೆ 400 ಪ್ರವೇಶ ಶುಲ್ಕ ನಿಗಧಿಪಡಿಸಲಾಗಿದೆ. ಮಧ್ಯಾಹ್ನ ಉಪಾಹಾರದ ವ್ಯವಸ್ಥೆ ಇರುತ್ತದೆ.

ಸಂಪರ್ಕ ವಿ.ಮುರುಗೇಶ್ 9743817357, ರೇಣುಕಾಂಬಿಕೆ 9113659968, ಎಸ್.ಬಾಬು 8660178143.

ಪ್ರತಿಕ್ರಿಯಿಸಿ (+)