ಮಂಗಳವಾರ, ಜನವರಿ 18, 2022
22 °C

ಒಕ್ಕಲಿಗರನ್ನು ಒಡೆಯಲು ಬಿಡಲ್ಲ: ಎಚ್‌.ಡಿ.ದೇವೇಗೌಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಬ್ಬಿ (ತುಮಕೂರು): ‘ಜಿಲ್ಲೆಯಲ್ಲಿ ಯಾವ ಪುಣ್ಯಾತ್ಮ ಜಾತಿ ವಿಷ ಬೀಜ ಬಿತ್ತಿದ್ದಾರೋ ಅವರಿಗೆ ತಕ್ಕ ಉತ್ತರ ನೀಡಬೇಕು. ಸಮಾಜವನ್ನು ಒಡೆದು, ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ‌ಇಂತಹ ಅನ್ಯಾಯ ನೋಡಿಕೊಂಡು ಸುಮ್ಮನಿರುವುದಿಲ್ಲ. ಅಂತಹವರ ವಿರುದ್ಧ ಜೀವ ಇರುವವರೆಗೂ ಹೋರಾಡುತ್ತೇನೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಗುಡುಗಿದರು.

ಹೆರೂರಿನಲ್ಲಿ ಪಕ್ಷದ ಅಭ್ಯರ್ಥಿ ಆರ್.ಅನಿಲ್ ಕುಮಾರ್ ಪರ ಶುಕ್ರವಾರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ‘ಒಕ್ಕಲಿಗ ಸಮುದಾಯದ ಗಂಗಟಕಾರ, ಕುಂಚಿಟಿಗ, ಮೊರಸು ಒಕ್ಕಲಿಗರೆಲ್ಲಾ ಒಂದೇ. ಆದರೆ ಕೆಲವರು ನಮ್ಮ ಸಮುದಾಯದ ಒಗ್ಗಟ್ಟು ಮುರಿದು, ನಮ್ಮ ಶಕ್ತಿ ನಾಶ ಮಾಡಲು ಹೊರಟಿದ್ದಾರೆ’ ಎಂದು ಟೀಕಿಸಿದರು.

ಓದಿ: 

‘ಕಳೆದ ಲೋಕಸಭೆ ಚುನಾವಣೆಯಲ್ಲಿ ನನ್ನ ಸೋಲಿಗೆ ಕಾರಣರಾದವರ ಸಮುದಾಯದವರನ್ನೇ ಅಭ್ಯರ್ಥಿ ಮಾಡಿದ್ದೇನೆ.
ನನ್ನ ಸೋಲಿನ ನೋವು ಮರೆಯಬೇಕಾದರೆ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಿ’ ಎಂದು ಮನವಿ ಮಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು