ಗುರುವಾರ , ಸೆಪ್ಟೆಂಬರ್ 19, 2019
22 °C

‘ಸರ್ಕಾರದ ಆಯಸ್ಸು ನಾಲ್ಕು ತಿಂಗಳು’ : ಎಚ್.ಡಿ.ಕುಮಾರಸ್ವಾಮಿ

Published:
Updated:

ತುಮಕೂರು: ‘ಬಿಜೆಪಿ ಸರ್ಕಾರದ ಆಯಸ್ಸು ನಾಲ್ಕು ತಿಂಗಳಷ್ಟೆ. ಮಧ್ಯಂತರ ಚುನಾವಣೆ ನಡೆಯಲಿದ್ದು ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರಲಿದೆ’ ಎಂದು ಎಚ್.ಡಿ.ಕುಮಾರಸ್ವಾಮಿ ನುಡಿದರು.

ನೊಣವಿನಕೆರೆಯಲ್ಲಿ ಆದಿಚುಂಚನಗಿರಿ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ‘ಮುಂದಿನ ಮುಖ್ಯಮಂತ್ರಿ ನೀವೇ’ ಎಂದು ಘೋಷಣೆ ಕೇಳಿಬಂದಾಗ ಹೀಗೆ ಪ್ರತಿಕ್ರಿಯಿಸಿದರು.

‘ನಾವು ಮನಸ್ಸು ಮಾಡಿದ್ದರೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಾಂಗ್ರೆಸ್– ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಉಳಿಸಿ ಕೊಳ್ಳಬಹುದಿತ್ತು. ಆ ಕೆಲಸ ಮಾಡಲಿಲ್ಲ. ಹಾಗೆ ಉಳಿಸಿಕೊಳ್ಳುವ ಮನಸ್ಸೂ ಇರಲಿಲ್ಲ’ ಎಂದರು.

Post Comments (+)