ತುರುವೇಕೆರೆ: ‘ರಾಜ್ಯದಲ್ಲಿರುವ ನಿರುದ್ಯೋಗ ಹೋಗಲಾಡಿಸಲು ಇಲ್ಲಿ ಕೈಗಾರಿಕೆಗಳನ್ನು ತೆರೆದು ನಿರುದ್ಯೋಗ ತೊಡೆದು ಹಾಕಬೇಕೆಂದು ಹೊರಟರೆ ರಾಜ್ಯ ಸರ್ಕಾರದಿಂದ ಯಾವದೇ ಸ್ಪಂದನೆ ಇಲ್ಲ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ತಾಲ್ಲೂಕಿನ ಮಾಯಸಂದ್ರ ಹೋಬಳಿಯ ಸೊರವನಹಳ್ಳಿಯ ಆದಿಶಕ್ತಿ ಕಾಳಘಟ್ಟಮ್ಮ ನೂತನ ದೇವಾಲಯದ ವಿಮಾನ ಗೋಪುರ ಕಳಸ ಸ್ಥಾಪನೆ ಮತ್ತು ಕುಂಭಾಭಿಷೇಕ, ಬನ್ನಿಮಂಟಪ, ಕರಿಯಮ್ಮನ ಗುಡ್ಡೆ ಮತ್ತು ಚಿಕ್ಕಮ್ಮ ದೇವಾಲಯದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.

‘ರಾಜ್ಯ ಸರ್ಕಾರ ಗ್ಯಾರಂಟಿಗಳಿಗಾಗಿ ಕೋಟಿ ಕೋಟಿ ಸಾಲ ಮಾಡಿ ಅಧಿಕಾರ ಮಾಡುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿರುವ ಜನರ ಜೇಬು ಕತ್ತರಿಸಲು ಮದ್ಯದ ದರವನ್ನು ನಾಲ್ಕೈದು ಬಾರಿ ಹೆಚ್ಚಿಸಿದೆ. ಮಹಿಳೆಯರ ಖಾತೆಗೆ ಹಣ ಹಾಕಿ ಪತಿಯ ಮೂಲಕ ತಮ್ಮ ಹಣ ವಾಪಸ್ಸು ಪಡೆಯುವ ಹುನ್ನಾರ ನಡೆಯುತ್ತಿದೆ’ ಎಂದು ದೂರಿದರು.

ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಎಂ.ಡಿ.ಲಕ್ಷ್ಮಿನಾರಾಯಣ್, ಎಚ್.ನಿಂಗಪ್ಪ, ರಾಜ್ಯ ಯುವ ಜೆಡಿಎಸ್ ನ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್, ಗುಬ್ಬಿ ನಾಗರಾಜು, ತಿಪಟೂರು ಶಾಂತಕುಮಾರ್, ಬೆಲವತ್ತದ ಜಗದೀಶ್, ವಿಠಲದೇವರಹಳ್ಳಿ ಹರೀಶ್, ಕೊಂಡಜ್ಜಿ ವಿಶ್ವನಾಥ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-17-311840005

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.