ಶುಕ್ರವಾರ, ಆಗಸ್ಟ್ 23, 2019
22 °C

ಮಠದ ಮಕ್ಕಳಿಗೆ ₹ 15 ಲಕ್ಷದ ಔಷಧಿ ವಿತರಣೆ

Published:
Updated:
Prajavani

ತುಮಕೂರು: ಸಿದ್ಧಗಂಗಾ ಆಸ್ಪತ್ರೆ ಮತ್ತು ಕೆಲವು ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಹತ್ತು ಸಾವಿರ ಮಕ್ಕಳಿಗೆ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಸಿದ್ಧಗಂಗಾ ಮಠದ ಆವರಣದಲ್ಲಿ ಆಯೋಜಿಸಲಾಗಿತ್ತು.

ಆಗಸ್ಟ್ 13 ಮತ್ತು 14 ರಂದು ನಡೆದ ಈ ಬೃಹತ್ ಆರೋಗ್ಯ ಶಿಬಿರ ಆಯೋಜನೆಗೆ ಮೈಕ್ರೋ ಲ್ಯಾಬ್ಸ್, ಡಾ.ರಾಜ್‌ಕುಮಾರ್ ಟ್ರಸ್ಟ್, ರಾಮಯ್ಯ ವೈದ್ಯಕೀಯ ಕಾಲೇಜು, ಶ್ರೀದೇವಿ ವೈದ್ಯಕೀಯ ಕಾಲೇಜು, ಬಿಡದಿ ಹೋಬಳಿ ಕೆಮಿಸ್ಟ್ ಪ್ರತಿಷ್ಠಾನ ಹಾಗೂ ಚಲನಚಿತ್ರ ನಟ ಎಸ್.ದೊಡ್ಡಣ್ಣ ಅವರು ಸಹಕಾರ ನೀಡಿದ್ದರು.

ಮಕ್ಕಳ ಕಣ್ಣು, ಕಿವಿ, ಮೂಗು, ಗಂಟಲು, ಚರ್ಮ, ಹಲ್ಲಿನ ಸಮಸ್ಯೆ ಸೇರಿದಂತೆ 20 ಕ್ಕೂ ಹೆಚ್ಚು ವಿಭಾಗಗಳಲ್ಲಿ 80ಕ್ಕೂ ಹೆಚ್ಚು ವೈದ್ಯರು ಆರೋಗ್ಯ ತಪಾಸಣೆ ಮಾಡಿದರು. ಶಿಬಿರ ನಡೆದ ಎರಡೂ ದಿನ ಅಂದಾಜು ₹ 15 ಲಕ್ಷ ಔಷಧವನ್ನು ಮಕ್ಕಳಿಗೆ ವಿತರಿಸಲಾಯಿತು.

ಸಿದ್ದಲಿಂಗ ಸ್ವಾಮೀಜಿ, ಸಂಸ್ಥೆಗಳು ಮಕ್ಕಳ ಆರೋಗ್ಯಕ್ಕೆ ಇಷ್ಟೊಂದು ಕಾಳಜಿ ತೋರಿಸುತ್ತಿರುವುದು ಸಂತಸವಾಗಿದೆ ಎಂದರು.

Post Comments (+)