ರಕ್ತದಾನದಿಂದ ಜೀವಕ್ಕೆ ‌ನೆರವು

7
ನಗರದ ರಮಣಮಹರ್ಷಿ ಕಾಲೇಜಿನಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ

ರಕ್ತದಾನದಿಂದ ಜೀವಕ್ಕೆ ‌ನೆರವು

Published:
Updated:
Deccan Herald

ತುಮಕೂರು: ಯುವ ಸಮೂಹ ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವಕ್ಕೆ ನೆರವಾಗಬೇಕು ಎಂದು ಶ್ರೀದೇವಿ ನರ್ಸಿಂಗ್‌ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಚ್.ಲಲಿತಾ ತಿಳಿಸಿದರು.

ನಗರದ ರಮಣ ಮಹರ್ಷಿ ನರ್ಸಿಂಗ್ ಕಾಲೇಜಿನಲ್ಲಿ ರಮಣ ಮಹರ್ಷಿ ಮತ್ತು ಶ್ರೀದೇವಿ ನರ್ಸಿಂಗ್ ಕಾಲೇಜಿನ ಆಶ್ರಯದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಶ್ರೇಷ್ಠದಾನಗಳಲ್ಲಿ ರಕ್ತದಾನ ಮಹತ್ವದಾಗಿದೆ. ರಕ್ತದಾನದಿಂದ ಹಲವು ರೋಗಗಳಿಂದ ಮುಕ್ತರಾಗಿ ಸದೃಢ ದೇಹ ಪಡೆಯಲು  ಸಾಧ್ಯ ಎಂದು ಹೇಳಿದರು.

ರಮಣ ಮಹರ್ಷಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ.ದಯಾನಂದ್‌ ಮಾತನಾಡಿ, ’ಯುವ ಜನರು ಮತ್ತು ಸಾರ್ವಜನಿಕರು  ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಬೇಕು. ಇದರಿಂದ ಹಲವು ರೋಗಿಗಳ ಜೀವ ಉಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ರಕ್ತದಾನ ಮಾಡಬೇಕಾಗಿದೆ’ ಎಂದು ಮನವಿ ಮಾಡಿಕೊಂಡರು.

ಶ್ರೀದೇವಿ ಕಾಲೇಜಿನ ಆಡಳಿತಾಧಿಕಾರಿ ಟಿ.ವಿ.ಬ್ರಹ್ಮದೇವಯ್ಯ, ’ರಕ್ತದಾನ ಉತ್ತಮ ಆರೋಗ್ಯ ಪಡೆಯಬಹುದು. ಹಾಗೇ ಎಲ್ಲರೂ ರಕ್ತ ಪರೀಕ್ಷೆ ಮಾಡಿಸಿಕೊಂಡು ರಕ್ತದ ಗುಂಪನ್ನು ತಿಳಿದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

 ಪ್ರೊ.ಮುನಿಸ್ವಾಮಿ, ಡಾ.ಮನೋಜ್, ರಕ್ತನಿಧಿಯ ತಾಂತ್ರಿಕ ಮೇಲ್ವಿಚಾರಕ ಕೆ.ಲೂಕಸ್, ವ್ಯಾಲೆಂಟಿನಾ ಮೇರಿ, ಲೀನು, ಶರತ್, ರೈನ್ ಉಲ್ಲ, ರುಕ್ಸರ್ ಹಾಗೂ ರಾಹುಲ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !