ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಬ್ಬಿ: ಹೇಮಾವತಿ ನಾಲೆಗೆ ಹೆದ್ದಾರಿ ಮಣ್ಣು, ಸಂಚಾರ–ನೀರು ಹರಿವು ಸ್ಥಗಿತದ ಆತಂಕ

Last Updated 22 ಅಕ್ಟೋಬರ್ 2019, 4:15 IST
ಅಕ್ಷರ ಗಾತ್ರ

ತುಮಕೂರು: ಗುಬ್ಬಿ ತಾಲ್ಲೂಕು ನಿಟ್ಟೂರು ಹೋಬಳಿ ಸಾಗರನಹಳ್ಳಿ ಗೇಟ್ ಸಮೀಪ ರಾಷ್ಟ್ರೀಯ ಹೆದ್ದಾರಿಯ 206ರಲ್ಲಿಒಂದು ಬದಿಯಲ್ಲಿ ಮಣ್ಣುಕುಸಿದಿದೆ.

ಮಣ್ಣು ಕುಸಿತ ಹೆಚ್ಚಾದರೆಮುಖ್ಯ ನಾಲೆ ಮುಚ್ಚಿಕೊಳ್ಳುವ ಸಾಧ್ಯತೆಇದೆ. ಅಂಥ ಸಂದರ್ಭ ಎದುರಾದರೆ ಸಮೀಪದಕಾರೇಹಳ್ಳಿ ಎಸ್ಕೇಪ್ಪೂರ್ಣ ಪ್ರಮಾಣದಲ್ಲಿ ತೆರೆದು ಮುಖ್ಯ ನಾಲೆಯಲ್ಲಿ ನೀರು ಹರಿಯುವ ವೇಗವನ್ನು ನಿಯಂತ್ರಿಸಬೇಕಾಗುತ್ತದೆ.

ಕಳೆದ ಮೂರು ತಿಂಗಳಿಂದೀಚೆಗೆ ಹೆದ್ದಾರಿಯ ಮಣ್ಣುಕುಸಿಯುತ್ತಿತ್ತು. ಅಧಿಕಾರಿಗಳು ಅತ್ತ ಗಮನಹರಿಸಲಿಲ್ಲ. ಸೋಮವಾರ ರಾತ್ರಿ ಈ ಪ್ರದೇಶದಲ್ಲಿ ಭಾರಿ ಮಳೆ ಸುರಿದು,ರಸ್ತೆ ಮೇಲೆ ನೀರು ಹರಿಯಿತು. ನೀರಿನ ರಭಸಕ್ಕೆ ಹೆದ್ದಾರಿಬದಿಯ ಮಣ್ಣು ನಾಲೆಗೆ ಕೊಚ್ಚಿ ಹೋಗಿದೆ.

ಮಣ್ಣುಕುಸಿತ ಹೆಚ್ಚಾದರೆ ಹೆದ್ದಾರಿ ಮಾರ್ಗದಲ್ಲಿ ವಾಹನ ಸಂಚಾರ ಬದಲಿಸಬೇಕಾಗುತ್ತದೆ. ನಾಲೆಯಲ್ಲಿ ನೀರು ಹರಿಯದಿದ್ದರೆ ಗುಬ್ಬಿ, ಶಿರಾ, ತುಮಕೂರು, ಕುಣಿಗಲ್ ತಾಲ್ಲೂಕಿಗೆಹೇಮಾವತಿ ನೀರು ಹರಿಯುವುದಕ್ಕೆ ತೊಂದರೆಯಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT