ಶನಿವಾರ, ಡಿಸೆಂಬರ್ 7, 2019
18 °C

ನಗರಕ್ಕೆ ಹೇಮಾವತಿ ನೀರು ಪೂರೈಕೆ ಪ್ರಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು ನಗರದ ಪಿ.ಎನ್.ಪಾಳ್ಯದಲ್ಲಿರುವ ನೀರು ಶುದ್ಧೀಕರಣ ಘಟಕದಲ್ಲಿ ಭಾನುವಾರ ಕಂಡು ಬಂದ ಹೇಮಾವತಿ ನೀರು ಶುದ್ಧೀಕರಣ ಪ್ರಕ್ರಿಯೆ ನೋಟ

ತುಮಕೂರು: ಕಳೆದ ಎರಡು ತಿಂಗಳಿಂದ ನೀರಿನ ಸಮಸ್ಯೆ ಅನುಭವಿಸಿ ಬಸವಳಿದ ನಗರದ 35 ವಾರ್ಡ್‌ಗಳಿಗೆ ಸೋಮವಾರ ಮಹಾನಗರ ಪಾಲಿಕೆಯು ನೀರು ಪೂರೈಕೆ ಪ್ರಾರಂಭಿಸಿದೆ.

ಹೇಮಾವತಿ ಜಲಾಶಯದಿಂದ ಬುಗುಡನಹಳ್ಳಿ ಕೆರೆಗೆ ನಾಲ್ಕೈದು ದಿನಗಳಿಂದ ನೀರು ಹರಿದು ಬರುತ್ತಿದೆ. ನಗರದ ಪಿ.ಎನ್.ಪಾಳ್ಯ ನೀರು ಶುದ್ಧೀಕರಣ ಘಟಕಕ್ಕೆ ಬುಗುಡನಹಳ್ಳಿ ಕೆರೆಯಿಂದ ನೀರನ್ನು ಪಂಪ್ ಮಾಡಿದ್ದು, ಭಾನುವಾರ ಶುದ್ಧೀಕರಣ ಪ್ರಕ್ರಿಯೆ ನಡೆದಿದ್ದು, ಸೋಮವಾರದಿಂದ ಈ ಮೊದಲಿನಂತೆ 35 ವಾರ್ಡ್‌ಗಳಿಗೆ ನೀರು ಪೂರೈಸಲಾಗುತ್ತಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ಇನ್ನೂ 10 ದಿನ ಹೇಮಾವತಿ ಜಲಾಶಯದಿಂದ ಬುಗುಡನಹಳ್ಳಿ ಕೆರೆಗೆ ನೀರು ಹರಿದರೆ ಕೆರೆ ಸಂಪೂರ್ಣ ಭರ್ತಿಯಾಗಲಿದೆ. ನೀರಿನ ಸಮಸ್ಯೆ ಒಂದು ವರ್ಷದ ಮಟ್ಟಿಗೆ ಇರುವುದಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದರು. ಪ್ರತಿ ವಾರ್ಡ್‌ಗೆ ಮೂರು ದಿನಕ್ಕೊಮ್ಮೆ ನೀರು ಪೂರೈಸಲಾಗುವುದು. ಆಯಾ ವಾರ್ಡ್ ಬಡಾವಣೆ ಜನಸಂಖ್ಯೆಗೆ ಅನುಗುಣವಾಗಿ ನೀರು ಪೂರೈಕೆ ಮಾಡಲಾಗುತ್ತದೆ. ಕನಿಷ್ಠ 1ರಿಂದ ಎರಡು ತಾಸು ನೀರು ಪೂರೈಕೆ ನಡೆಯಲಿದೆ. ಅಲ್ಲದೇ, ಈಗಾಗಲೇ ಕೊಳವೆ ಬಾವಿ ಕೊರೆಸಿದ್ದು, ಅವುಗಳಿಂದಲೂ ನೀರಿನ ಅಭಾವ ಇರುವ ಪ್ರದೇಶಕ್ಕೆ ಪೂರೈಕೆ ನಡೆಯಲಿದೆ ಎಂದು ತಿಳಿಸಿದರು.

‘ ಕೆರೆಗೆ ಹೇಮಾವತಿ ನೀರು ಭರ್ತಿಯಾಗುತ್ತಿರುವುದರಿಂದ ನೀರಿನ ಸಮಸ್ಯೆ ಇಲ್ಲ. ಶುದ್ಧೀಕರಣ ಘಟಕ್ಕೆ ಭಾನುವಾರವೇ ಹರಿಸಿದ್ದು, ಬಡಾವಣೆಗಳಿಗೆ ಹಂತ ಹಂತವಾಗಿ ನೀರು ಪೂರೈಸಲಾಗುವುದು’ ಎಂದು ಮೇಯರ್ ಸುಧೀಶ್ವರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು