ಮಂಗಳವಾರ, ಜೂನ್ 28, 2022
25 °C

ಕೇರಳದಲ್ಲಿ ಗಮನ ಸೆಳೆದ ಜಿಲ್ಲೆ ಹಲಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಲಸಿನ ಮೇಳದಲ್ಲಿ ಡಾ.ಜಿ.ಕರುಣಾಕರಣ್, ಶ್ರೀಪಡ್ರೆ ಅವರು ಕೇರಳದ ಹಲಸಿನ ಉದ್ಯಮಿ ಸುಭಾಷ್ ಅವರಿಗೆ ಹಲಸಿನ ಹಣ್ಣು ಬಿಡಿಸಿ ಕೊಡುತ್ತಿರುವುದು.

ತೋವಿನಕೆರೆ: ಕೇರಳದ ವೈಯನಾಡು ಜಿಲ್ಲೆಯ ಅಂಬಲವಯಲ್‌ನಲ್ಲಿ ಜು.9ರಿಂದ 15ರ ವರೆಗೆ ನಡೆದ ಅಂತರ ರಾಷ್ಟ್ರೀಯ ಹಲಸು ಮೇಳದಲ್ಲಿ ಜಿಲ್ಲೆಯ ಹಲಸಿನ ಹಣ್ಣುಗಳು ಗಮನ ಸೆಳೆದವು. ಅಲ್ಲದೆ ಎಲ್ಲರ ಬಾಯಲ್ಲಿಯೂ ಉತ್ತಮ ಅಭಿಪ್ರಾಯ ಹೊರಡಿಸಿದವು.

ಈ ಹಲಸಿನ ಹಣ್ಣಿನ ರುಚಿ ನೋಡಿ, ಬಣ್ಣ ಹೇಗಿದೆ, ತಿರುಳನ ದಪ್ಪ ಹೇಗಿದೆ...ಎಂದು ಮೇಳಕ್ಕೆ ಬಂದಿದ್ದ ದೇಶ, ವಿದೇಶದ ಪ್ರತಿನಿಧಿಗಳಿಗೆ ಹಿರೇಹಳ್ಳಿಯ ತೋಟಗಾರಿಕಾ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಕರುಣಾಕರನ್ ಮಾಹಿತಿ ನೀಡುತ್ತಿದ್ದರು.

ಗುಬ್ಬಿ ತಾಲ್ಲೂಕಿನ ಸೀಗೆನಹಳ್ಳಿ ಪರಮೇಶ್ವರ್ ಅವರ ‘ಸಿದ್ಧು ಹಲಸು’ ಕುರಿತು ವಿವರಿಸಿದರು. ಕೇರಳ ರಾಜ್ಯದ ಪ್ರತಿನಿಧಿಗಳು ಚೇಳೂರು ಮಾರುಕಟ್ಟೆ ಮತ್ತು ಜಿಲ್ಲೆಯ ವೈವಿಧ್ಯ ಹಲಸುಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಮೊದಲ ಎರಡು ದಿನ ಕರುಣಾಕರನ್ ಜಿಲ್ಲೆಯ ಹಲಸು ಹಣ್ಣಿನ ಬಗ್ಗೆ ಪ್ರತಿನಿಧಿಗಳಿಗೆ ಸಮಗ್ರ ಮಾಹಿತಿ ನೀಡಿದರು. 13 ಮತ್ತು 14 ರಂದು ಜಿಲ್ಲೆಯ ವಿವಿಧ ಭಾಗಗಳಿಂದ ಕೆಂಪು ಹಣ್ಣುಗಳನ್ನು ತರಿಸಿಕೊಂಡು ಹಣ್ಣುಗಳ ಬಗ್ಗೆ ವಿವರಿಸಿದರು.

ಮರದ ವಯಸ್ಸು, ಹಣ್ಣು ಬಿಡುವ ಸಮಯ, ಇಳುವರಿ, ಬೆಲೆ, ತೂಕ, ಸೇರಿದಂತೆ ಹಲವು ಪ್ರಶ್ನೆಗಳನ್ನು ಕರುಣಾಕರನ್ ಅವರಲ್ಲಿ ಪ್ರತಿನಿಧಿಗಳು ಕೇಳಿದರು. ಕೆಲವು ವಿದೇಶಿಯರು, ಕೇರಳ ಹಾಗೂ ತಮಿಳುನಾಡಿನ ಉದ್ಯಮಿಗಳು ಶೀಘ್ರದಲ್ಲಿ ತುಮಕೂರಿಗೆ ಭೇಟಿ ನೀಡಿ ಹಲಸಿನ ಕುರಿತು ಮಾಹಿತಿ ಪಡೆಯುವ ಆಸಕ್ತಿ ವ್ಯಕ್ತಪಡಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು