ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃದ್ಧೆಗೆ ಮಂಡಿ ಮರುಜೋಡಣೆ

ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ ಶ್ರೀದೇವಿ ವೈದ್ಯಕೀಯ ಮಹಾವಿದ್ಯಾಲಯ ವೈದ್ಯರ ತಂಡ
Last Updated 5 ಡಿಸೆಂಬರ್ 2019, 9:11 IST
ಅಕ್ಷರ ಗಾತ್ರ

ತುಮಕೂರು: ತುಮಕೂರಿನ ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ಕೀಲು ಮತ್ತು ಮೂಳೆ ವಿಭಾಗದ ವೈದ್ಯರು 65 ವರ್ಷದ ವೃದ್ಧೆಗೆ ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ನಡೆಸಿ ಸ್ವಾವಲಂಬಿಯಾಗಿ ನಡೆದಾಡುವಂತೆ ಮಾಡಿದ್ದಾರೆ.

ತುಮಕೂರಿನ ಮಂಜುನಾಥ್ ವರ ತಾಯಿ ಸಿದ್ದಗಂಗಮ್ಮ (65) ಎಂಬುವವರು ಕಾಲು ಮತ್ತು ಮಂಡಿ ನೋವಿನಿಂದ ಬಳಲುತ್ತಿದ್ದರು. ಇತರರ ಸಹಾಯದಿಂದ ನಡೆದಾಡುತ್ತಿದ್ದರು. ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ತಾವೇ ನಡೆದಾಡುವಂತಾಗಿದ್ದಾರೆ.

‘ವೈದ್ಯರ ತಂಡ ರೋಗಿಯ ಪರೀಕ್ಷೆ ಮಾಡಿ ಸಾಮಾನ್ಯ ಶಸ್ತ್ರಚಿಕಿತ್ಸೆಗೆ ಗುಣವಾಗುವುದು ಕಷ್ಟವಾಗಿರುವುದರಿಂದ ಮಂಡಿ ಮರುಜೋಡಣೆ ಶಸ್ತ್ರಚಿಕಿತ್ಸೆ ಮಾಡಲಾಯಿತು. ಅತಿ ಕಡಿಮೆ ಅವಧಿಯಲ್ಲಿ ರೋಗಿ ತಾವೇ ನಡೆದಾಡುವಂತಾಗಿದ್ದಾರೆ’ ಎಂದು ಶ್ರೀದೇವಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ಕೀಲು ಮತ್ತು ಮೂಳೆ ವಿಭಾಗದ ತಜ್ಞ ಡಾ.ಅಬ್ದುಲ್ ಖಾದರ್‌ ತಿಳಿಸಿದರು.

ಆಸ್ಪತ್ರೆ ತಜ್ಞ ವೈದ್ಯರಾದ ಡಾ.ಅಕ್ಬರ್ ಇಕ್ರಂ ಅಹಮ್ಮದ್, ಡಾ.ಅಬ್ದುಲ್ ಖಾದರ್, ಡಾ.ಕೆ.ಆರ್.ರಾಧೇಶ್ ಹಾಗೂ ಅನುಭವಿ ವೈದ್ಯರ ತಂಡ ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT