ತುಮಕೂರು: ತಾಲ್ಲೂಕಿನ ಮಸ್ಕಲ್ ಗ್ರಾಮದ ಮನೆಯೊಂದರಲ್ಲಿ ದಾಸ್ತಾನು ಮಾಡಿದ್ದ ಜಿಲೆಟಿನ್, ಗನ್ಪೌಡರ್ ಸ್ಫೋಟಗೊಂಡು ಮನೆ ಧ್ವಂಸಗೊಂಡಿದ್ದು, ಮಹಿಳೆ ಗಾಯಗೊಂಡಿದ್ದಾರೆ.
ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ ಲಕ್ಷ್ಮಿಕಾಂತ್ ಎಂಬುವರ ಮನೆಯಲ್ಲಿ ಈ ಸ್ಫೋಟ ನಡೆದಿದೆ. ಮನೆಯಲ್ಲಿದ್ದ ಸುವರ್ಣಮ್ಮ ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಲ್ಲು ಕ್ವಾರಿ ಸ್ಫೋಟಿಸಲು ಮನೆಯಲ್ಲಿ ಜಿಲೆಟಿನ್, ಗನ್ಪೌಡರ್ ದಾಸ್ತಾನು ಮಾಡಲಾಗಿತ್ತು. ಸ್ಫೋಟದ ನಂತರ ಶೋಧ ನಡೆಸಿದ್ದು, ಮನೆಯಲ್ಲಿ ನಾಡ ಬಂದೂಕು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.