ಹುಳಿಯಾರು: ಹೋಬಳಿಯ ಗೌಡಗೆರೆ ಗ್ರಾಮದ ಸರ್ವೆ ನಂಬರ್ 140 ರಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಬೆಣಚುಕಲ್ಲು ಗಣಿಗಾರಿಕೆ ಸ್ಥಳಕ್ಕೆ ಶುಕ್ರವಾರ ತಹಶೀಲ್ದಾರ್ ಎಂ.ಮಮತಾ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಹಲವು ವರ್ಷಗಳಿಂದ ಎಗ್ಗಿಲ್ಲದೆ ಗೋರಿ ಕಲ್ಲು (ಬೆಣಚು ಕಲ್ಲು) ಗಣಿಗಾರಿಕೆ ನಡೆಯುತ್ತಿತ್ತು. ಈ ಹಿಂದೆ ಇಲ್ಲಿ ಗೋರಿ ಕಲ್ಲು ಲಭ್ಯವಿದ್ದು ಅದಿರು ಮುಗಿದು ಹೋಗಿದೆ. 2015ರಲ್ಲಿ ಮತ್ತೆ ನವೀಕರಣಗೊಳಿಸಿಕೊಂಡು ಇದೇ ಜಾಗದಲ್ಲಿ ಗಣಿಗಾರಿಕೆ ನಡೆಸುತ್ತಿದ್ದಾರೆ. ಗೋರಿ ಕಲ್ಲು ಇಲ್ಲದ್ದರಿಂದ ಪರವಾನಗೆ ಹೆಸರಿನಲ್ಲಿ ಹಾಸನ ಜಿಲ್ಲೆಯ ಅರಸಿಕೆರೆ ತಾಲ್ಲೂಕಿನಿಂದ ಅದಿರು ತಂದು ಗಣಿಗಾರಿಕೆ ನಡೆಸುತ್ತಿದ್ದರು. ರಾತ್ರಿ ಸಮಯದಲ್ಲಿ ಇಲ್ಲಿಗೆ ತಂದು ಕಲ್ಲುಗಳನ್ನು ಚೂರು ಮಾಡಿಸುತ್ತಿದ್ದರು ನಂತರ ಅದನ್ನು ಹಗಲಿನಲ್ಲಿ ತುಂಬಿ ಹೊರಗಡೆ ಕಳಿಸುತ್ತಿದ್ದರು. ಇದು ನಿರಂತರವಾಗಿ ಸಾಗಿತ್ತು ಆ ಗಣಿಗಾರಿಕೆ ನಡೆದ ಜಾಗದಲ್ಲಿ ಆಳವಾದ ಗುಂಡಿ ಬಿದ್ದಿದೆ ಎಂದು ಸ್ಥಳೀಯರು ದೂರಿದ್ದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ತೇಜಸ್ವಿನಿ ಗಣಿಗಾರಿಕೆ ಸ್ಥಗಿತಕ್ಕೆ ಸ್ಥಳಕ್ಕೆ ಭೇಟಿ ನೀಡಿದ್ದರು. ಸಾಮಗ್ರಿ ಸಮೇತ ವಾಹನವನ್ನು ಹುಳಿಯಾರು ಪೊಲೀಸ್ ಠಾಣೆಯ ವಶಕ್ಕೆ ನೀಡಿದ್ದು ಪಿಸಿಆರ್ ನಂತರ ಪ್ರಕರಣ ದಾಖಲಿಸಲಾಗುವುದು ಎಂದು ತಹಶೀಲ್ದಾರ್ ಎಂ.ಮಮತಾ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-17-2068253213

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.