ಹುಳಿಯಾರು: ಪಟ್ಟಣದ ಎಪಿಎಂಸಿಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ನಡೆಯುತ್ತಿದೆ. ಖರೀದಿಗೆ ಒಂದು ವಾರ ಮಾತ್ರ ಕಲಾವಕಾಶ ಉಳಿದಿರುವುದರಿಂದ ರೈತರು ಮಾರಾಟಕ್ಕೆ ಮುಗಿಬಿದ್ದಿದ್ದಾರೆ. ಗುರುವಾರ ಸುಮಾರು ಒಂದು ಕಿ.ಮೀ. ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಫೆಬ್ರುವರಿ 15ರಿಂದ ಹುಳಿಯಾರು ಎಪಿಎಂಸಿ ಹಾಗೂ ಚಿಕ್ಕನಾಯಕನಹಳ್ಳಿ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ 2024-25ನೇ ಸಾಲಿನ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಪ್ರಯೋಜಕತ್ವದಲ್ಲಿ ಖರೀದಿ ಆರಂಭವಾಗಿತ್ತು. ಎರಡು ಕಡೆ ಸೇರಿ ತಾಲ್ಲೂಕು ವ್ಯಾಪ್ತಿಯಲ್ಲಿ 11 ಸಾವಿರ ರೈತರು 3.5 ಲಕ್ಷ ಕ್ವಿಂಟಲ್ ರಾಗಿ ಮಾರಾಟ ಮಾಡಲು ನೋಂದಣಿ ಮಾಡಿಸಿದ್ದರು.

ಮೇ 6ರ ವರೆಗೆ ಚಿಕ್ಕನಾಯಕನಹಳ್ಳಿ ಖರೀದಿ ಕೇಂದ್ರದಲ್ಲಿ 1.27 ಲಕ್ಷ ಕ್ವಿಂಟಲ್ ಹಾಗೂ ಹುಳಿಯಾರು ಎಪಿಎಂಸಿಯಲ್ಲಿ 1.25 ಲಕ್ಷ ಕ್ವಿಂಟಲ್ ರಾಗಿಯನ್ನು ಸುಮಾರು 7,500 ರೈತರು ಮಾರಾಟ ಮಾಡಿದ್ದಾರೆ. ಇನ್ನೂ 2,500 ರೈತರ 80 ಸಾವಿರ ಕ್ವಿಂಟಲ್ ರಾಗಿಯನ್ನು ಖರೀದಿ ಮಾಡಬೇಕಿದೆ.

ಖರೀದಿ ಕೇಂದ್ರದಲ್ಲಿ ನೂಕು ನುಗ್ಗಲು ಆರಂಭವಾಗಿದೆ. ಹುಳಿಯಾರು ಎಪಿಎಂಸಿಯಿಂದ ಒಂದು ಕಿ.ಮೀ ದೂರದ ಬಳ್ಳೆಕಟ್ಟೆವರೆಗೆ ರಾಗಿ ತುಂಬಿದ ಟ್ರ್ಯಾಕ್ಟರ್ ಹಾಗೂ ಇತರೆ ವಾಹನಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತಿವೆ. ರಸ್ತೆಯಲ್ಲಿಯೇ ವಾಹನಗಳು ನಿಂತಿದ್ದು ಓಡಾಟಕ್ಕೂ ತೊಂದರೆಯಾಗಿದೆ. ಕಡು ಬಿಸಿಲನ್ನು ಲೆಕ್ಕಿಸದೆ ರೈತರು ಕಾಯುತ್ತಾ ವಾಹನಗಳ ಬಳಿ ಬಿಡಾರ ಹೂಡಿದ್ದಾರೆ.

‘ಮೊದಲು ಮೇ 30 ಖರೀದಿಗೆ ಕೊನೆಯ ದಿನಾಂಕ ಎಂದು ಪ್ರಕಟಿಸಿತ್ತು. ಆದರೆ ದಿಢೀರ್ ಮೇ 15 ಕೊನೆ ದಿನ ಎಂದು ಪ್ರಕಟಿಸಿರುವುದರಿಂದ ಗೊಂದಲದಲ್ಲಿದ್ದೇವೆ. ಇದರಿಂದ ರೈತರು ಮಾರಾಟಕ್ಕೆ ನಾ ಮುಂದು ತಾಮುಂದು ಎಂದು ಸಾಲುಗಟ್ಟಿ ನಿಲ್ಲಿಸಿಕೊಂಡಿದ್ದೇವೆ’ ಎಂದು ರೈತರು ತಿಳಿಸಿದರು.

ಸರ್ಕಾರ ಕೂಡಲೇ ಮೊದಲು ನಿಗದಿಪಡಿಸಿದ ದಿನದವರೆಗೆ ಖರೀದಿ ಮಾಡಬೇಕು ಎಂದು ಒತ್ತಾಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-17-375114500

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.