ಪ್ರಜಾವಾಣಿ ವಾರ್ತೆ

ಹುಳಿಯಾರು: ಹೆಸರು ಬಿತ್ತನೆಗೆ ಸಕಾಲವಾಗಿರುವ ಭರಣಿ ಮಳೆ ವಾರ ಕಳೆದರೂ ಸಿಂಚನವಾಗಿಲ್ಲ. ಹೋಬಳಿ ವ್ಯಾಪ್ತಿಯ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದ ಹೆಸರು ಬಿತ್ತನೆಗೆ ಹಿನ್ನಡೆ ಭೀತಿ ಎದುರಾಗಿದೆ.

ಹೊಸ ಮಳೆ ಆರಂಭವಾಗಿ ಅಶ್ವಿನಿ ಮಳೆ ಬರೀ ಬಿಸಿಲಿನಲ್ಲಿಯೇ ಕಳೆದು ಹೋಗಿದೆ. ಭರಣಿ ಮಳೆ ಪೂರ್ವ ಮುಂಗಾರು ಬೆಳೆಗಳಾದ ಹೆಸರು, ಅಲಸಂದೆ, ಉದ್ದು, ಹರಳು ಸೇರಿದಂತೆ ಇತರ ಬೀಜಗಳ ಬಿತ್ತನೆಗೆ ಸಕಾಲ. ಅಶ್ವಿನಿ ಮಳೆ ಬಂದರೆ ರೈತರು ಹಿಂಗಾರು ಬೆಳೆಯನ್ನು ಕೊಯ್ಲು ಮಾಡಿದ್ದ ಹೊಲಗಳನ್ನು ಸ್ವಚ್ಛಗೊಳಿಸಿ ಹೊಲಗಳನ್ನು ಮುಂಗಾರು ಬೀಜಗಳ ಬಿತ್ತನೆಗೆ ಅಣಿಗೊಳಿಸಿಕೊಳ್ಳುತ್ತಿದ್ದರು. ಆದರೆ ನೆಲಕ್ಕೆ ಒಂದು ಹನಿಯೂ ಹನಿಯದೆ ಬಿರು ಬಿಸಿಲು ರೈತರನ್ನು ಹೈರಾಣಾಗಿಸಿದೆ.

ಭರಣಿ ಮಳೆ ಆರಂಭದಲ್ಲಿ ಬಂದರೆ ಬೇಗ ಹೊಲಗಳನ್ನು ಸ್ವಚ್ಛಗೊಳಿಸಿಕೊಂಡು ಬಿತ್ತನೆ ಮಾಡಲು ಸಾಧ್ಯವಾಗುತ್ತಿತ್ತು. ಮಳೆಗಾಲದ ಆರಂಭದಲ್ಲಿ ಮಳೆ ಬಂದು ಬೀಜ ಬಿತ್ತನೆ ಮಾಡಿದರೆ ನಂತರ ಅದೇ ಹೊಲಗಳನ್ನು ಸ್ವಚ್ಛಗೊಳಿಸಿ ರಾಗಿ, ನವಣೆ, ಜೋಳ ಬಿತ್ತನೆ ಮಾಡುತ್ತಾರೆ. ಹೆಸರು ಮತ್ತಿತರ ಬೆಳೆ ಚನ್ನಾಗಿ ಬಂದರೆ ರೈತರಿಗೆ ಮುಂದಿನ ಕೃಷಿ ಚಟುವಟಿಕೆಗಳಿಗೆ ಸಹಾಯವಾಗಲಿದೆ. ಈಗಾಗಲೇ ಕುಡಿಯುವ ನೀರು ಸೇರಿದಂತೆ ಅಡಿಕೆ, ತೆಂಗು ಬೆಳೆಗಳು ಒಣಗಿಹೋಗಿದ್ದು ರೈತರು ಕೊಳವೆಬಾವಿ ಕೊರೆಸಿ ನೀರು ಬಾರದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಹು ಬೇಗ ಮಳೆ ಬಂದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ರೈತರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-17-599709854

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.