ಹುಳಿಯಾರು: ಹೋಬಳಿಯಲ್ಲಿ ಶುಕ್ರವಾರ ರಾತ್ರಿ ಬೀಸಿದ ಭಾರಿ ಬಿರುಗಾಳಿ ಮಳೆಗೆ ಬೋರನ ಕಣಿವೆ ಸರ್ಕಾರಿ ಪ್ರೌಢಶಾಲೆಯ ಅಡುಗೆ ಮನೆ ಚಾವಣಿ ಹಾರಿಹೋಗಿದೆ. ರಾತ್ರಿ ಆಗಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.

ಶಾಲೆಯ ಅಡುಗೆ ಮನೆಯ ಆರ್ಸಿಸಿ ಕಟ್ಟಡದ ಮೇಲೆ ಮಳೆಯ ರಕ್ಷಣೆಗಾಗಿ ತಗಡಿನ ಶೀಟ್ಗಳನ್ನು ಅಳವಡಿಸಲಾಗಿತ್ತು. ಅಬ್ಬರದ ಗಾಳಿಗೆ ತಗಡಿನ ಶೀಟ್ಗಳು ಸಂಪೂರ್ಣವಾಗಿ ಹಾರಿಹೋಗಿವೆ. ಚಲ್ಲಾಪಿಲ್ಲಿಯಾಗಿ ಶಾಲಾ ಆವರಣ ಸೇರಿದಂತೆ ವಿದ್ಯುತ್ ಕಂಬಕ್ಕೆ ಅಳವಡಿಸಿರುವ ಕೇಬಲ್ಗಳಲ್ಲಿ ನೇತಾಡುತ್ತಿವೆ. ಮರುಬಳಕೆಗೆ ಬಾರದ ರೀತಿಯಲ್ಲಿ ಸಂಪೂರ್ಣವಾಗಿ ಜಖಂಗೊಂಡು ಅಡುಗೆ ಮನೆಗೆ ನಷ್ಟ ಉಂಟಾಗಿದೆ.

ಹದ ಮಳೆ: ಹೋಬಳಿ ವ್ಯಾಪ್ತಿಯ ಬೋರನಕಣಿವೆ ಜಲಾಶಯದ ಭಾಗದಲ್ಲಿ ಹದ ಮಳೆಯಾಗಿದೆ. ಹುಳಿಯಾರು ಪಟ್ಟಣ ಸೇರಿದಂತೆ ಸುತ್ತಮುತ್ತ ಗಾಳಿ ಸಮೇತ ಸೋನೆ ಮಳೆಯಾಗಿದೆ. ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿಯ ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದ ಮಾಮೂಲಿಯಂತೆ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆ ಆಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260531-17-408460019

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.