ಹುಳಿಯಾರು: ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಸಮುದಾಯ ಭವನಗಳ ನಿರ್ಮಾಣಕ್ಕೆ ₹50 ಲಕ್ಷ ಹಣ ನೀಡಲಾಗಿದೆ. ಇನ್ನುಳಿದ ವೀರಶೈವ ಹಾಗೂ ಒಕ್ಕಲಿಗ ಸಮುದಾಯಕ್ಕೂ ಹಣ ನೀಡಲಾಗುವುದು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.

ಸಮೀಪದ ದೊಡ್ಡಎಣ್ಣೆಗೆರೆ ಗ್ರಾಮದ ಬಳಿಯ ಬಂಜಾರ ಸಮುದಾಯದ ಭೀಮಾಸತಿ ದೇಗುಲ ಆವರಣದಲ್ಲಿ ಭಾನುವಾರ ಯಾತ್ರಿ ನಿವಾಸ ಕಟ್ಟಡದ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಭೀಮಾಸತಿ ಕ್ಷೇತ್ರ ರಾಜ್ಯದ ಬಂಜಾರ ಸಮುದಾಯದ ಶಕ್ತಿ ಕೇಂದ್ರವಾಗಿದ್ದು ಮುಂದಿನ ದಿನಗಳಲ್ಲಿ ಧಾರ್ಮಿಕ ಕ್ಷೇತ್ರವಾಗಿ ಪ್ರಬುದ್ಧಮಾನಗೊಳಿಸಲು ತೀರ್ಮಾನಿಸಲಾಗಿದೆ. ಯಾವ ತಾಂಡಾಗಳಿಗೆ ಚರಂಡಿ, ಅಂಗನವಾಡಿ ಸೇರಿದಂತೆ ಯಾವ ಸೌಕರ್ಯಗಳು ಬೇಕು ಎಂಬುದನ್ನು ಪಟ್ಟಿಮಾಡಿ ನೀಡುವಂತೆ ಲಂಬಾಣಿ ಮುಖಂಡರಿಗೆ ತಿಳಿಸಿದರು.

ತಾಲ್ಲೂಕು ಲಂಬಾಣಿ ಸಂಘದ ಮುಖಂಡ ರಘುನಾಥ್ ಮಾತನಾಡಿ, ಭೀಮಾಸತಿ ಕ್ಷೇತ್ರದ ಅಭಿವೃದ್ಧಿಗೆ ಶಾಸಕರು ಒತ್ತು ನೀಡಿದ್ದಾರೆ ಎಂದರು.

ಜಿ.ಪಂ ಮಾಜಿ ಸದಸ್ಯೆ ಲೋಹಿತಾಬಾಯಿ ಮಾತನಾಡಿ, ಶಾವಿಗೆಹಳ್ಳಿ ಬಳಿ ಗುರುತಿಸಿರುವ ಲಂಬಾಣಿ ಸಮುದಾಯದ ಜಾಗದ ಅಭಿವೃದ್ಧಿಗೆ ಶಾಸಕರು ಒತ್ತು ನೀಡಬೇಕು ಎಂದರು.

ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಚೇತನಾ, ರಾಜನಾಯ್ಕ, ತಿಮ್ಮಾನಾಯ್ಕ, ಕರಿಯಾನಾಯ್ಕ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-17-1210693880

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.