ಹುಳಿಯಾರು: ಹೋಬಳಿ ಹೊಯ್ಸಳಕಟ್ಟೆ ಗ್ರಾಮದಲ್ಲಿ ಅನಾಥವಾಗಿದ್ದ ವೀರಗಲ್ಲು ಶಿರಾ ತಾಲ್ಲೂಕು ಬುಕ್ಕಾಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಬೆಂಗಳೂರಿನ ಇತಿಹಾಸ ಅಕಾಡೆಮಿ ಸಹಯೋಗದಲ್ಲಿ ಬುಧವಾರ ನಡೆದ ಕ್ಷೇತ್ರಾಧ್ಯಯನ ಕಾರ್ಯಕ್ರಮದಲ್ಲಿ ಸಂರಕ್ಷಣೆ ಮಾಡಿದರು.

ತುಮಕೂರು ವಿಶ್ವವಿದ್ಯಾಲಯ ಇತಿಹಾಸ ವಿಭಾಗದ ಸಂಶೋಧನಾರ್ಥಿ ಕೆ.ಸಿ.ಶಶಿಕುಮಾರನಾಯ್ಕ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ವೇಳೆ ಮಾಹಿತಿ ನೀಡಿ 14–15ನೇ ಶತಮಾನಕ್ಕೆ ಸೇರಿದ ಎರಡು ತುರುಗೋಳ್ ವೀರಗಲ್ಲು ಶಾಸನವಾಗಿದೆ. ವೀರಗಲ್ಲು ಹೊಯ್ಸಳಕಟ್ಟೆ ಗ್ರಾಮದ ಇತಿಹಾಸ ಸಾರುತ್ತದೆ. ಸ್ಮಾರಕಗಳನ್ನು ರಕ್ಷಿಸುವ ಕೆಲಸ ಮಾಡಬೇಕಾಗಿದ್ದು ನಮ್ಮೆಲ್ಲರ ಹೊಣೆಯೂ ಆಗಿದೆ. ಸ್ಮಾರಕಗಳು ಭವಿಷ್ಯದ ಯುವ ಸಮುದಾಯಕ್ಕೆ ಲಭ್ಯವಾಗಬೇಕು ಎಂಬದು ಮೂಲ ಆಶಯವಾಗಿದೆ ಎಂದರು.

ಬುಕ್ಕಾಪಟ್ಟಣ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಧರಣೇಂದ್ರಕುಮಾರಿ, ಗ್ರಾಮದ ಮುಖಂಡರಾದ ಹಿರಿಯರಾದ ರಾಮದಾಸಪ್ಪ, ಗೋವಿಂದರಾಜು, ವದ್ದಿಗಯ್ಯ, ತಿಮ್ಮರಾಯಪ್ಪ, ಹನುಮಂತರಾಯಪ್ಪ, ಕಾಲೇಜಿನ ಉಪನ್ಯಾಸಕರಾದ ಎ.ಎಂ.ಸತೀಶ್, ಎನ್.ಮಹೇಶ್, ಎಸ್.ಕೆ. ಶಾರ್ವರಿ, ಖಲೀದಾ ಖಾನಂ, ನರೇಂದ್ರಬಾಬು, ಬಾನು, ಕುಮಾರ್ ಜಗದೀಶ್, ಶ್ರೀನಿವಾಸ್ ಭಾಗವಹಿಸಿದ್ದರು. ವೀರಗಲ್ಲನ್ನು ಸಂಕ್ಷರಣೆ ಮಾಡುವಂತೆ ಗ್ರಾಮಸ್ಥರಿಗೆ ಮನವರಿಕೆ ಮಾಡಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-17-372687364

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.