ಹುಳಿಯಾರು: ಪಟ್ಟಣದ ಸೇವಾಲಾಲ್ ಸರ್ಕಲ್ನಲ್ಲಿ ಈಚೆಗೆ ಚಿಕ್ಕನಾಯಕನಹಳ್ಳಿ ತಾಲ್ಲೂಕು ಸೇವಾಲಾಲ್ ಮರಿಯಮ್ಮ ತಾಂಡಾಭಿವೃದ್ಧಿ ಟ್ರಸ್ಟ್ ಮತ್ತು ತಾಲ್ಲೂಕು ಜಯಂತೋತ್ಸವ ಸೇವಾ ಸಮಿತಿ ವತಿಯಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ 58 ತಾಂಡಾಗಳ ವ್ಯಾಪ್ತಿಯಲ್ಲಿ ಶೇ90ಕ್ಕಿಂತ ಹೆಚ್ಚು ಅಂಕಗಳಿಸಿದ ಲಂಬಾಣಿ ಸಮುದಾಯದ 35ಕ್ಕೂ ಹೆಚ್ಚು ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಎಸ್ಸೆಸ್ಸೆಲ್ಸಿ, ಪಿಯು, ಪದವಿ ಹಾಗೂ ಎಂಎಸ್ಸಿ ಸೇರಿದಂತೆ ಸ್ನಾತಕೋತ್ತರ ಪದವಿಗಳಲ್ಲಿ ಅತ್ಯುನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್, ಸಿಂಗಟಗೆರೆ ರಾಜ ನಾಯ್ಕ್, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಘುನಾಥ್, ಬೆಂಗಳೂರಿನ ಸಾಮ್ರಾಟ್ ಹೋಟೆಲ್ನ ಯತೀವೇಂದ್ರ ನಾಯ್ಕ್ ಭೀಯಾ, ಹುಳಿಯಾರು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗೀತಾ ರಾಘವೇಂದ್ರ, ಸದಸ್ಯ ಮಂಜಾ ನಾಯ್ಕ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಲೋಹಿತಾ ಬಾಯಿ, ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಚೇತನ ಗಂಗಾಧರ್ ಹಾಗೂ ಮಾಜಿ ಉಪಾಧ್ಯಕ್ಷ ಮೋತಿ ನಾಯ್ಕ್ ಉಪಸ್ಥಿತರಿದ್ದರು.

ಬೆಸ್ಕಾಂ ಎಇಇ ಗವಿರಂಗಯ್ಯ, ಎಂಜಿನಿಯರ್ ಬೈರಾಪುರ ಉಮೇಶ್ ನಾಯ್ಕ್, ಬರಕನಾಹಾಲ್ ತಾಂಡಾದ ಸಮಾಜ ಸೇವಕ ಚಂದ್ರ ನಾಯ್ಕ್, ಆಲದಕಟ್ಟೆ ತಾಂಡಾದ ಲ್ಯಾಂಡ್ ಡೆವಲಪರ್ ಕುಮಾರ್ ನಾಯ್ಕ್, ಶಿಕ್ಷಕಿ ಲಕ್ಷ್ಮಿಬಾಯಿ, ಹುಳಿಯಾರು ಪ್ರಾಥಮಿಕ ಬ್ಯಾಂಕ್ ನಿರ್ದೇಶಕ ಗಾರೆ ಕರಿಯ ನಾಯ್ಕ್, ಎಐಬಿಎಸ್ಎಸ್ ಅಧ್ಯಕ್ಷ ಲಕ್ಷ್ಮಿಕಾಂತ್ ದೊಡ್ಡಬಿದರೆ, ಸಮಾಜ ಸೇವಕರಾದ ಸೋಮನಹಳ್ಳಿ ಕೃಷ್ಣ ನಾಯ್ಕ್, ಆಲದಕಟ್ಟೆ ತಿಮ್ಮನಾಯ್ಕ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-17-1033393705

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.