ಹುಳಿಯಾರು (ಚಿಕ್ಕನಾಯಕನಹಳ್ಳಿ): ಹೋಬಳಿಯ ಕೆಂಕೆರೆ ಸಮೀಪದ ಗೊಲ್ಲರಹಟ್ಟಿ ಗೇಟ್ ಬಳಿ ಗುರುವಾರ ಮಾರುತಿ ಓಮ್ನಿ ಕಾರಿಗೆ ಇನ್ನೋವಾ ಕಾರು ಡಿಕ್ಕಿಯಾಗಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ.

ಆಂಧ್ರ ಪ್ರದೇಶದ ಅದೋನಿಯ ಗಂಗೇಶ್ವರ ರೆಡ್ಡಿ (68), ಪತ್ನಿ ಇಂದಿರಮ್ಮ(63) ಮಗಳು ಸೌಮ್ಯ(39) ಮೃತರು. ಅದೋನಿಯ ರವಿಕುಮಾರ್ (42) ಸಾಫ್ಟ್ವೇರ್ ಎಂಜಿನಿಯರ್. ಪತ್ನಿ, ಅತ್ತೆ, ಮಾವ, ಇಬ್ಬರು ಮಕ್ಕಳ ಜತೆಗೆ ಮೈಸೂರಿಗೆ ಹೋಗಿದ್ದರು.

ಮೈಸೂರಿನಿಂದ ಆದೋನಿ ಕಡೆಗೆ ತೆರಳುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ ಬದಿ ನಿಂತಿದ್ದ ಓಮ್ನಿ ಕಾರು ರಸ್ತೆಗೆ ಹೋಗುವಾಗ ಇದೇ ಮಾರ್ಗದಲ್ಲಿ ಬಂದ ಇನ್ನೋವಾ ಕಾರು ಡಿಕ್ಕಿ ಹೊಡೆಡಿದೆ. ಓಮ್ನಿ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಡಿಕ್ಕಿ ಹೊಡೆದ ನಂತರ ಕಾರು ಗುಂಡಿಗೆ ಉರುಳಿ ಬಿದ್ದಿದೆ. ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ರವಿಕುಮಾರ್, ಮಕ್ಕಳಾದ ಚಾರ್ವಿ ರೆಡ್ಡಿ (10), ಚರಿತ್ (ರೆಡ್ಡಿ) ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಓಮ್ನಿ ಚಾಲಕನಿಗೆ ಕಾಲು ಮುರಿದಿದೆ. ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.