ಹುಳಿಯಾರು: ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷೆ ಪ್ರೀತಿ ರಾಘವೇಂದ್ರ ಅವರ ಮೊದಲ ಸಾಮಾನ್ಯ ಸಭೆ ಶಾಸಕ ಸಿ.ಬಿ. ಸುರೇಶ್ ಬಾಬು ಉಪಸ್ಥಿತಿಯಲ್ಲಿ ಬುಧವಾರ ನಡೆಯಿತು. ಒಟ್ಟು 60 ಪ್ರಮುಖ ವಿಷಯಗಳನ್ನು ಕೇವಲ ಒಂದೂಕಾಲು ಗಂಟೆಯೊಳಗೆ ಚರ್ಚಿಸಿ ಅನುಮೋದನೆ ನೀಡಲಾಯಿತು.

ಸಭೆ ಆರಂಭದಲ್ಲಿಯೇ ಅಕಾಲಿಕವಾಗಿ ನಿಧನರಾದ ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

ನಂತರ ನಡೆದ ಸಭೆಯಲ್ಲಿ ಕಸದ ವಾಹನಗಳು ಹಾಗೂ ಟ್ರ್ಯಾಕ್ಟರ್ಗಳಿಗೆ ಖಾಲಿ ಇರುವ ಚಾಲಕರ ಮತ್ತು ಪೌರಕಾರ್ಮಿಕರ ನೇಮಕಾತಿಗೆ ಟೆಂಡರ್ ಕರೆಯಲು ತೀರ್ಮಾನಿಸಲಾಯಿತು.

2025-26ನೇ ಸಾಲಿನ ಕಂದಾಯ ತೆರಿಗೆಯನ್ನು ಶೇ 5ರಷ್ಟು ಪರಿಷ್ಕರಣೆ ಮಾಡಲು ಒಪ್ಪಿಗೆ ನೀಡಲಾಯಿತು. ಪಟ್ಟಣದ ಎಲ್ಲ ಮನೆಗಳಿಗೆ ಹಸಿ ಹಾಗೂ ಒಣ ಕಸದ ಡಸ್ಟ್ ಬಿನ್ಗಳನ್ನು ವಿತರಿಸುವುದು, ನೀರು ಶುದ್ಧೀಕರಣ ಘಟಕಕ್ಕೆ ಬ್ಲೀಚಿಂಗ್ ಪುಡಿ ಖರೀದಿ, ನೀರಿನ ಟ್ಯಾಂಕ್ ಸ್ವಚ್ಛತೆಗೆ ಆದ್ಯತೆ ನೀಡಲು ನಿರ್ಧರಿಸಲಾಯಿತು.

ಎಪಿಎಂಸಿ ಬಳಿಯ ಸಂತೆ ಮೈದಾನಕ್ಕೆ ಮಣ್ಣು ಹಾಕಿದ ಬಿಲ್ ಪಾವತಿಗೆ ಸದಸ್ಯರಾದ ದಯಾನಂದ್ ಮತ್ತು ಕೆ.ಎಂ.ಎಲ್. ಕುಮಾರ್ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಸುರೇಶ್ ಬಾಬು, ಸಂತೆ ಸ್ಥಳಾಂತರದ ಬಗ್ಗೆ ಒಮ್ಮತದ ತೀರ್ಮಾನ ಕೈಗೊಂಡು ವ್ಯಾಪಾರಿಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲು ಸೂಚಿಸಿದರು.

ಪಟ್ಟಣದ ಎಲ್ಲ ವೃತ್ತಗಳಿಗೆ ದಾರ್ಶನಿಕರ ಹೆಸರನ್ನು ಇಡಲು ತೀರ್ಮಾನಿಸಲಾಯಿತು. ಜಿಲ್ಲಾ ಕೇಂದ್ರಗಳ ಮಾದರಿಯಲ್ಲಿ ಹುಳಿಯಾರಿನ ಎಲ್ಲ ವಾರ್ಡ್ಗಳಲ್ಲೂ ವಾರ್ಡ್ ಸಂಖ್ಯೆ, ಶಾಸಕರು ಹಾಗೂ ಸದಸ್ಯರ ಹೆಸರಿರುವ ಸ್ವಾಗತ ಮತ್ತು ನಾಮಫಲಕ ಅಳವಡಿಸಲು ಒಪ್ಪಿಗೆ ಸೂಚಿಸಲಾಯಿತು.

ಖಾಸಗಿ ಬಸ್ ನಿಲ್ದಾಣವನ್ನು ಆಧುನೀಕರಣಗೊಳಿಸಿ ಬಸ್ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಹಾಗೂ ಮುಂಭಾಗದ ಜಾಗದಲ್ಲಿ ಫುಡ್ ಕೋರ್ಟ್ ನಿರ್ಮಾಣಕ್ಕೆ ಸಮ್ಮತಿ ನೀಡಲಾಯಿತು. 1ರಿಂದ 16ನೇ ವಾರ್ಡ್ವರೆಗೆ ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ಒದಗಿಸಲು ಹಾಗೂ ಪ್ರಮುಖ ರಸ್ತೆ, ದೇವಸ್ಥಾನ, ವೃತ್ತಗಳಿಗೆ ಸಿಸಿ ಟಿ.ವಿ. ಕ್ಯಾಮೆರಾ ಮತ್ತು ಬೀದಿ ದೀಪ ಅಳವಡಿಸಲು ತೀರ್ಮಾನಿಸಲಾಯಿತು.

ಸಭೆಯಲ್ಲಿ ಉಪಾಧ್ಯಕ್ಷೆ ಕಾವ್ಯ ರಾಣಿ, ಮುಖ್ಯಾಧಿಕಾರಿ ಮಂಜುನಾಥ್, ಎಂಜಿನಿಯರ್ ಮಂಜುನಾಥ್, ಕಂದಾಯ ಅಧಿಕಾರಿ ಶೃತಿ ಹಾಗೂ ಪಂಚಾಯಿತಿ ಸದಸ್ಯರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260404-17-1560611660

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.