ಗುರುವಾರ , ಡಿಸೆಂಬರ್ 5, 2019
24 °C

ಪತಿಯಿಂದಲೇ ಪತ್ನಿಯ ಕೊಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಾ: ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 48 ರ ಮಹಾರಾಷ್ಟ್ರ ಡಾಬಾ ಬಳಿ ಭಾನುವಾರ ಪತಿಯೇ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ.

ಮಹಾರಾಷ್ಟ್ರ ರಾಜ್ಯದ ರಾಯಗಡ ಜಿಲ್ಲೆಯ ವಿಠಲವಾಡಿ ಗ್ರಾಮದ 40 ರಿಂದ 50 ಮಂದಿ ಕುಟುಂಬದೊಂದಿಗೆ ಮಧುಗಿರಿಗೆ ಇದ್ದಲು ಕೂಲಿ ಕೆಲಸಕ್ಕಾಗಿ ಹೋಗುತ್ತಿದ್ದರು. ಊಟಕ್ಕಾಗಿ ಡಾಬಾ ಮುಂದೆ ವಾಹನ ನಿಲ್ಲಿಸಿದ ಸಮಯದಲ್ಲಿ ಸುರೇಶ್ ಬಾರ್ಕೂ ಜಾಧವ್ ಎನ್ನುವ ವ್ಯಕ್ತಿ ತನ್ನ ಪತ್ನಿ ಅನಿತಾ (30) ಅವರಿಗೆ ಮಚ್ಚಿನಿಂದ ಕುತ್ತಿಗೆ ಭಾಗಕ್ಕೆ ಹೊಡೆದು ಲಾರಿಯಲ್ಲೇ ಹತ್ಯೆ ಮಾಡಿದ್ದಾನೆ.

ವಿಷಯ ತಿಳಿದು ಸ್ಥಳಕ್ಕೆ ಬಂದ ಶಿರಾ ನಗರ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದರು.

ಪ್ರತಿಕ್ರಿಯಿಸಿ (+)