ತುಮಕೂರು: ಮಹಿಳೆಯರು ಸವಾಲುಗಳನ್ನು ಮೆಟ್ಟಿ ನಿಂತರೆ ಗೆಲುವು ದಕ್ಕಿಸಿಕೊಳ್ಳಬಹುದು. ಆಧುನಿಕ ಭಾರತದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಇದಕ್ಕೆ ಮಾದರಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಭಿಪ್ರಾಯಪಟ್ಟರು.

ಸ್ಲಂ ಜನಾಂದೋಲನ– ಕರ್ನಾಟಕ, ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ, ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ 194ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಕ್ಷಣವಿದ್ದರೆ ಮಾತ್ರ ಘನತೆಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಆಸ್ತಿ, ಭೂಮಿ, ಮನೆ, ಚಿನ್ನಕ್ಕಿಂತ ಶಿಕ್ಷಣವೇ ದೊಡ್ಡ ಆಸ್ತಿ. 1848ರಲ್ಲಿ ಪತಿ ಜ್ಯೋತಿಬಾಫುಲೆ ಸಹಕಾರದೊಂದಿಗೆ ಪುಣೆಯಲ್ಲಿ ತಳ ಸಮುದಾಯಗಳ ಹೆಣ್ಣು ಮಕ್ಕಳಿಗೆ ಶಾಲೆ ಪ್ರಾರಂಭಿಸಿದರು. ಕೂಲಿ ಕಾರ್ಮಿಕರಿಗೆ ರಾತ್ರಿ ಶಾಲೆ ತೆರೆದಿದ್ದರು. ದಲಿತರಿಗಾಗಿ ಮನೆ ಬಾವಿಯ ಕುಡಿಯುವ ನೀರು ಬಿಟ್ಟುಕೊಟ್ಟಿದ್ದರು. ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಫುಲೆ ಕೊಡುಗೆ ಅಪಾರವಾಗಿದೆ ಎಂದು ನೆನಪಿಸಿಕೊಂಡರು.

ಮಹಾನಗರ ಪಾಲಿಕೆ ಆಯುಕ್ತರಾದ ಬಿ.ವಿ.ಅಶ್ವಿಜ, ‘ವಿಧವೆಯರ ತಲೆ ಬೋಳಿಸುವ ಪದ್ಧತಿಯನ್ನು ಸಾವಿತ್ರಿಬಾಯಿ ಫುಲೆ ವಿರೋಧಿಸಿದ್ದರು. ವಿಧವೆಯರಿಗೆ, ದೌರ್ಜನ್ಯಕ್ಕೆ ಒಳಗಾದ ಗರ್ಭಿಣಿಯರಿಗೆ ಪುನರ್ವಸತಿ ಕೇಂದ್ರ ಸ್ಥಾಪಿಸಿ ನೆಲೆ ಕೊಟ್ಟಿದ್ದರು. ಅವರ ಈ ಸ್ಫೂರ್ತಿಯಿಂದ ಮಹಿಳೆಯರು ಆಧುನಿಕ ಭಾರತದಲ್ಲಿ ಪ್ರಾಧಾನ್ಯತೆ ಪಡೆಯಲು ಸಾಧ್ಯವಾಗಿದೆ’ ಎಂದು ಹೇಳಿದರು.

ನಗರದ 35 ವಾರ್ಡ್ಗಳಲ್ಲಿರುವ ಸ್ಲಂಗಳ ಮೂಲಭೂತ ಸೌಕರ್ಯಗಳ ಬಗ್ಗೆ ಅಧ್ಯಯನ ಮಾಡಿ ನೀರು, ಶೌಚಾಲಯ, ರಸ್ತೆ, ಚರಂಡಿ, ಇತರ ಸೌಲಭ್ಯ ಕಲ್ಪಿಸಲು ಪಾಲಿಕೆಯಿಂದ ಪ್ರತ್ಯೇಕ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದರು.

ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆ ಕಾರ್ಯದರ್ಶಿ ಅನುಪಮಾ, ಸ್ಲಂ ಜನಾಂದೋಲನ– ಕರ್ನಾಟಕ ಸಂಚಾಲಕ ಎ.ನರಸಿಂಹಮೂರ್ತಿ, ಮುಖಂಡರಾದ ದೀಪಿಕಾ, ಮಂಗಳಮ್ಮ, ಪೂರ್ಣಿಮಾ, ಸುಧಾ, ಶಾರದಮ್ಮ, ಗುಲ್ನಾಜ್, ಮಹದೇವಮ್ಮ, ಉಪಸ್ಥಿತರಿದ್ದರು. ಅರುಣ್ ಸ್ವಾಗತಿಸಿ, ತಿರುಮಲಯ್ಯ ನಿರೂಪಿಸಿ, ಕೃಷ್ಣಮೂರ್ತಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.