ಹುಳಿಯಾರು: ಕೆರೆ ಮಣ್ಣು ಅಕ್ರಮ ಸಾಗಾಣಿಕೆ- ರೈತರ ಪ್ರತಿರೋಧ

ಹುಳಿಯಾರು: ಇಲ್ಲಿನ ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತೆಗೆಯಲು ಮುಂದಾದ ಇಟ್ಟಿಗೆ ಕಾರ್ಖಾನೆಯವರಿಗೆ ಕೇಶವಾಪುರದ ರೈತರು ಪ್ರತಿರೋಧ ವ್ಯಕ್ತಪಡಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲು ಮುಂದಾಗಿದ್ದಾರೆ.
ಕೆರೆಯಲ್ಲಿ ಅಕ್ರಮವಾಗಿ ಮರಳು ಹಾಗೂ ಮಣ್ಣು ತೆಗೆಯುತ್ತಾರೆ ಎಂಬ ದೂರಿನ ಮೇರೆಗೆ ಭೂ ವಿಜ್ಞಾನ ಅಧಿಕಾರಿಗಳು ಈಚೆಗಷ್ಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೆ ಅಕ್ರಮವಾಗಿ ಮಣ್ಣು ತೆಗೆದಯಂತೆ ಎಚ್ಚರಿಕೆ ನೀಡಿದ್ದರು.
ಆದರೆ ಗುರುವಾರ ಸಂಜೆ ಕೆರೆಯಲ್ಲಿ ಮಣ್ಣು ತೆಗೆಯಲು ಜೆಸಿಬಿ ಯಂತ್ರದ ಸಮೇತ ಕೆಲ ಇಟ್ಟಿಗೆ ಕಾರ್ಖಾನೆಗಳವರು ಬಂದಿದ್ದರು. ಇದನ್ನು ಕಂಡು ಎಚ್ಚೆತ್ತುಕೊಂಡ ರೈತರು ಮಣ್ಣು ತೆಗೆಯದಂತೆ ಪ್ರತಿರೋಧ ವ್ಯಕ್ತ ಪಡಿಸಿದ್ದಾರೆ. ಅಲ್ಲದೆ ಅಕ್ರಮವಾಗಿ ಮಣ್ಣು ತೆಗೆಯಲು ಬಂದವರ ಫೋಟೊ ತೆಗೆದು ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ನಿಧಾನವಾಗಿಯಾದರೂ ರೈತರಲ್ಲಿ ಜಾಗೃತಿ ಮೂಡುತ್ತಿರವುದು ಒಳ್ಳೆಯ ಬೆಳವಣಿಗೆ ಎಂದು ಲಂಚಮುಕ್ತ ಕರ್ನಾಟಕ ವೇದಿಕೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಭಟ್ಟರಹಳ್ಳಿ ಮಲ್ಲಿಕಾರ್ಜುನಯ್ಯ ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.