ಸೋಮವಾರ, 7 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಳೆಯ ಪಿಂಚಣಿ ವ್ಯವಸ್ಥೆ ಜಾರಿ ಶೀಘ್ರ: ಸಿ.ಎಸ್‌.ಷಡಕ್ಷರಿ

ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಕ್ಷರಿ ಹೇಳಿಕೆ
Published : 15 ಸೆಪ್ಟೆಂಬರ್ 2024, 3:35 IST
Last Updated : 15 ಸೆಪ್ಟೆಂಬರ್ 2024, 3:35 IST
ಫಾಲೋ ಮಾಡಿ
Comments

ತುಮಕೂರು: ಹಳೆಯ ಪಿಂಚಣಿ ವ್ಯವಸ್ಥೆ (ಒಪಿಎಸ್‌) ಶೀಘ್ರದಲ್ಲೇ ಜಾರಿಯಾಗಲಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್‌.ಷಡಕ್ಷರಿ ತಿಳಿಸಿದರು.

ನಗರದಲ್ಲಿ ಶನಿವಾರ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ನೌಕರರಿಗೆ 7ನೇ ವೇತನ ಆಯೋಗದ ವರದಿ ಅನ್ವಯ ಸಂಬಳ ದೊರೆಯುತ್ತಿದೆ. ಇದಕ್ಕಾಗಿ ಸರ್ಕಾರ ₹21,500 ಕೋಟಿ ನೀಡಿದೆ. ನಮ್ಮ ಹೋರಾಟದಲ್ಲಿ ಜಿಲ್ಲೆಯ ನೌಕರರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಸಂಘ ಆರ್ಥಿಕವಾಗಿ ಸದೃಢವಾಗಿದೆ. ಮಕ್ಕಳು ಸಾಧನೆ ಮಾಡಿದಾಗ ಅವರನ್ನು ಗೌರವಿಸುವುದು ನಮ್ಮ ಕರ್ತವ್ಯ. ಇದುವರೆಗೂ 40 ಸಾವಿರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಗಿದೆ ಎಂದರು.

ಶಿಕ್ಷಣದಿಂದ ಸ್ವಾಭಿಮಾನದ ಬದುಕು ಸಾಧ್ಯ. ಉನ್ನತ ಸ್ಥಾನಕ್ಕೆ ಹೋದಾಗ ಯಾರೂ ಸಂಬಂಧಗಳನ್ನು ಮರೆಯಬಾರದು. ಹಿರಿಯರ ಮೇಲಿನ ಗೌರವ ಕಡಿಮೆಯಾಗಬಾರದು. ನಿಮ್ಮ ಸಾಧನೆಯ ಹಿಂದೆ ಅವರ ಶ್ರಮವಿದೆ ಎಂಬುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ‘ಮಕ್ಕಳ ಪ್ರತಿಭೆ ವಿಕಾಸಗೊಳಿಸುವ ಕಾರ್ಯಕ್ರಮ, ಕಾರ್ಯಾಗಾರ ಏರ್ಪಡಿಸಬೇಕು. ಸಂಪನ್ಮೂಲ ವ್ಯಕ್ತಿಗಳಿಂದ ಹಲವು ವಿಚಾರಗಳ ಕುರಿತು ತಿಳಿಸಬೇಕು. ಮಕ್ಕಳ ಶೈಕ್ಷಣಿಕ, ಸಾಮಾಜಿಕ ಬೆಳವಣಿಗೆಗೆ ಸಹಕಾರಿಯಾಗಬೇಕು’ ಎಂದರು.

ನೌಕರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಬಸವರಾಜು, ‘ಮಕ್ಕಳು ಮಾನವೀಯ ಮೌಲ್ಯ ರೂಢಿಸಿಕೊಳ್ಳಬೇಕು. ಸಮಾಜದಲ್ಲಿ ವಿದ್ಯಾವಂತರಿಂದಲೇ ಹೆಚ್ಚಿನ ಅವಘಡಗಳು ನಡೆಯುತ್ತಿವೆ. ಪ್ರತಿಭೆಯನ್ನು ಜಾತಿಯ ಮೂಲಕ ಅಳೆಯಲಾಗುತ್ತದೆ. ಇದು ಬದಲಾಗಬೇಕು’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ, ಜಿಲ್ಲಾಧಿಕಾರಿ ಕಚೇರಿ ಸಹಾಯಕ ಜಿ.ವಿ.ಮೋಹನ್‌ಕುಮಾರ, ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ನರಸಿಂಹರಾಜು, ಪದಾಧಿಕಾರಿಗಳಾದ ಶ್ರೀನಿವಾಸ್ ತಿಮ್ಮೇಗೌಡ, ಸಿದ್ದರಾಮಯ್ಯ, ರುದ್ರಪ್ಪ, ಪಾಂಡುರಂಗ, ಆರ್.ಪರಶಿವಮೂರ್ತಿ, ಎಚ್‌.ವಿ.ರಮೇಶ್‌, ಬಿ.ಆರ್.ವೆಂಕಟೇಶ್, ಕರುಣಾಕರಶೆಟ್ಟಿ, ಎಚ್.ಎಂ.ರುದ್ರೇಶ್, ಟಿ.ಎನ್.ಜಗದೀಶ್, ಮಂಜುಳಾ, ಎಚ್.ಕೆ.ನರಸಿಂಹಮೂರ್ತಿ, ಆರ್‌.ಪರಶಿವಮೂರ್ತಿ, ರೇಣುಕಾರಾಧ್ಯ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT