ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋವಿನಕೆರೆ: ಎಳೆ ಹಲಸಿಗೆ ಹೆಚ್ಚಿದ ಬೇಡಿಕೆ

Last Updated 1 ಫೆಬ್ರುವರಿ 2021, 4:39 IST
ಅಕ್ಷರ ಗಾತ್ರ

ತೋವಿನಕೆರೆ: ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಿಂದ ನಿತ್ಯ ಒಂದು ಟನ್ ಎಳೆಯ ಹಲಸಿನ ಕಾಯಿ ಉತ್ತರ ಭಾರತದ ರಾಜ್ಯಗಳಿಗೆ ಸರಬರಾಜಾಗುತ್ತಿದೆ. ಎಳೆಯ ಕಾಯಿಗಳಿರುವ ಮರವೊಂದನ್ನು ₹4,000ದಿಂದ ₹5,000ಕ್ಕೆ ಖರೀದಿಸುತ್ತಿದ್ದಾರೆ.

ಉತ್ತರ ಭಾರತದಲ್ಲಿ ಎಳೆಯ ಹಲಸಿನ ಕಾಯಿಗಳಿಂದ ತಯಾರಿಸುವ ಅನೇಕ ಖಾದ್ಯಗಳು ಜನಪ್ರಿಯವಾಗಿವೆ. ಮನೆ, ಹೋಟೆಲ್‌ಗಳಲ್ಲಿ ವಿಶೇಷವಾದ ಸ್ಥಾನ ಪಡೆದಿದೆ. ರಾಜ್ಯದ ಹಲವು ಪ್ರದೇಶಗಳಲ್ಲಿ ಕೆತ್ತಕಾಯಿ ಸಾರು ಬೇರೆ ಬೇರೆ ಹೆಸರಿನಿಂದ ಮೆಚ್ಚುಗೆಗಳಿಸಿದೆ.

ಡಿಸೆಂಬರ್‌ನಿಂದ ಮಾರ್ಚ್‌ವರೆಗೆ ನಿತ್ಯ ಒಂದು ಟನ್ ಹಲಸು ಉತ್ತರದ ರಾಜ್ಯಗಳಿಗೆ ಕಳುಹಿಸಲಾಗುತ್ತದೆ. ಪ್ರತಿವರ್ಷ ನವೆಂಬರ್‌ನಿಂದ ಪ್ರಾರಂಭವಾಗಬೇಕಿತ್ತು. ಆದರೆ ಈ ವರ್ಷ ಮಳೆಯಿಂದಾಗಿ ಒಂದು ತಿಂಗಳು ತಡವಾಗಿದೆ. ಕರಡಿ ಕಾಟದಿಂದ ಬೇಸತ್ತಿರುವ ಹಲಸು ಬೆಳೆಗಾರರು ಎಳೆಯ ಕಾಯಿಗಳನ್ನು ಹೆಚ್ಚಾಗಿ ಮಾರಾಟ ಮಾಡುತ್ತಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಹಲಸು ಈಗ ಆದಾಯ ತರುವ ಪ್ರಮುಖ ಬೆಳೆಯಾಗಿದೆ ಎನ್ನುತ್ತಾರೆ ಶ್ರಮಿಕ ಸಿರಿ ಸಂಘದ ಜೆ.ಸಿ.ಸೋಮಶೇಖರ್.

ಹಲಸಿನ ಸಂಸ್ಕರಣೆಗೆ ಹೊಸ ವಿಧಾನಗಳು ಪ್ರಾರಂಭವಾಗಿದ್ದು, ಎಳೆಯ ಕಾಯಿಗಳನ್ನು ಶುಚಿಗೊಳಿಸಿ, ಒಣಗಿಸಿ ಅಕಾಲಿಕ ಸಮಯದಲ್ಲಿ ಉಪಯೋಗಿಸಬಹುದು ಎನ್ನುತ್ತಾರೆ ತೋವಿನಕೆರೆ ಹಳ್ಳಿಸಿರಿ ಅಧ್ಯಕ್ಷ ಮಂಜಮ್ಮ ಎಸ್. ಬಾಲಯ್ಯ.

ಹಲಸಿನ ಹಣ್ಣು ಮತ್ತು ಎಳೆಯ ಕಾಯಿಗಳಿಂದ ನೂರಾರು ರೀತಿಯ ಖಾದ್ಯಗಳನ್ನು ಮಾಡಬಹುದು. ಹಳ್ಳಿಸಿರಿ ಸಂಘದಿಂದ ಐವತ್ತಕ್ಕೂ ಹೆಚ್ಚು ಖಾದ್ಯ ಮಾಡುತ್ತೇವೆ ಎನ್ನುತ್ತಾರೆ ಕಾರ್ಯದರ್ಶಿ ಜಿ.ಎಲ್.ಸುನೀತಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT