ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋವಿನಕೆರೆ: ಕಾಕಡ ಹೂವಿಗೆ ಹೆಚ್ಚಿದ ಬೆಲೆ

Last Updated 29 ನವೆಂಬರ್ 2020, 1:35 IST
ಅಕ್ಷರ ಗಾತ್ರ

ತೋವಿನಕೆರೆ: ಲಾಕ್‌ಡೌನ್ ಸಮಯದಲ್ಲಿ ಬೆಲೆ ಕುಸಿತದಿಂದ ಕಂಗೆಟ್ಟಿದ್ದ ಕಾಕಡ ಹೂವಿಗೆ ಈಗ ಉತ್ತಮ ಬೆಲೆ ಬಂದಿದ್ದು, ರೈತರಿಗೆ ಸಂತಸ ತರಿಸಿದೆ.

ಲಾಕ್‌ಡೌನ್‌ ವೇಳೆ ಕೆ.ಜಿಗೆ ₹10ಕ್ಕೂ ಖರೀದಿಸುವವರಿರಲಿಲ್ಲ. ಈಗಕೆ.ಜಿ. ಕಾಕಡ ₹650ಕ್ಕೆ ಮಾರಾಟವಾಗುತ್ತಿದೆ.

ತೋವಿನಕೆರೆ ಸುತ್ತಮುತ್ತಲಿನ ಹಳ್ಳಿಗಳ ಮೂರು ಸಾವಿರಕ್ಕೂ ಹೆಚ್ಚು ಕುಟುಂಬಗಳು ಕಾಕಡ ಬೆಳೆಯುತ್ತಾರೆ. ವರ್ಷದಲ್ಲಿ 8 ತಿಂಗಳು ದೇಶದ ವಿವಿಧ ರಾಜ್ಯಗಳಿಗೆ ಇಲ್ಲಿಂದ ಕಾಕಡ ಹೂವು ರವಾನಿಸಲಾಗುತ್ತದೆ.

ಸಾವಿರಾರು ಮಹಿಳೆಯರು ನಿತ್ಯ ಹೂವು ಬಿಡಿಸುವುದು, ಹೂವನ್ನು ಕೆ.ಜಿ. ಲೆಕ್ಕದಲ್ಲಿ ಕಟ್ಟಿ ಕೊಡುವುದರ ಮೂಲಕ ಹಣ ಗಳಿಸುತ್ತಿದ್ದಾರೆ.

ಬಿಡಿ ಹೂವನ್ನು ರೈತರಿಂದ ನೇರವಾಗಿ ಖರೀದಿ ಮಾಡುತ್ತೇವೆ. ಬೆಳೆಗಾರರಿಗೆ ಮುಗಂಡ ಹಣ ನೀಡಬೇಕು. ಬಂಡವಾಳ ಹೆಚ್ಚು ಬೇಕಾಗುತ್ತದೆ. ಬಡವನಹಳ್ಳಿ ಅಥಾವ ತುಮಕೂರು ಹೂವಿನ ಮಾರುಕಟ್ಟೆಯಿಂದ ಖರೀದಿ ಮಾಡಿ ತಂದು ಮಹಿಳೆಯರ ಮನೆಗಳಿಗೆ ಕೊಟ್ಟು ಕಟ್ಟಿಸಿ ಬೇಡಿಕೆ ಇರುವ ಕಡೆ ಕಳುಹಿಸುತ್ತೇವೆ ಎನ್ನುತ್ತಾರೆ ವ್ಯಾಪಾರಿ ಬಸವರಾಜು.

ಸಂಬಂಧಿಕರ ಹೂವಿನ ತೋಟದಲ್ಲಿ ಹೂವು ಬಿಡಿಸಿ, ಮಾರಾಟ ಮಾಡಿ ಬಂದ ಹಣದಲ್ಲಿ ಸಮಭಾಗ ತೆಗೆದುಕೊಳ್ಳುತ್ತೇವೆ. ಬೇರೆ ಸಮಯದಲ್ಲಿ ಐದು ಕೆ.ಜಿ. ಸಿಗುತ್ತಿದ್ದ ಕಡೆ ಚಳಿಯಿಂದಾಗಿ ಒಂದು ಕೆ.ಜಿ ಹೂವು ಸಿಗುತ್ತಿದೆ ಎನ್ನುತ್ತಾರೆ ರಮ್ಯ ಸಿದ್ದೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT