ಸೋಮವಾರ, ಏಪ್ರಿಲ್ 6, 2020
19 °C

ವಿದೇಶ ಪ್ರಯಾಣಿಕರ ಮಾಹಿತಿ ನೀಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಕೋವಿಡ್‌–19 ರಾಜ್ಯದಲ್ಲಿ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ಕಳೆದ 14 ದಿನಗಳಲ್ಲಿ ಯಾರಾದರೂ ವಿದೇಶ ಪ್ರಯಾಣ ಮಾಡಿದ್ದಲ್ಲಿ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ಜಿಲ್ಲೆಯ ನಾಗರಿಕರು ಕೋವಿಡ್‌–19 ಸೋಂಕು ಕಂಡು ಬಂದರೆ ಅಥವಾ ವಿದೇಶ ಪ್ರಯಾಣ ಮಾಡಿದವರಿದ್ದರೆ ಸಹಾಯವಾಣಿ 0816–2278387, 2251414, 94498 43269, 94498 43064, 104ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಅವರು ಕೋರಿದ್ದಾರೆ.

ಮಾಸ್ಕ್‌ನಿಂದ ಅಪಾಯವೇ ಹೆಚ್ಚು

ಆರೋಗ್ಯವಂತ ವ್ಯಕ್ತಿಗಳು ಮುಖಗವಸು(ಮಾಸ್ಕ್‌) ಬಳಸಬೇಕಾಗಿರುವುದಿಲ್ಲ. ಅನಾವಶ್ಯಕವಾಗಿ ಉಪಯೋಗಿಸುವ ಮುಖಗವಸುಗಳಿಂದ ಉಪಯುಕ್ತಕ್ಕಿಂತ ತೊಂದರೆಗಳೇ ಹೆಚ್ಚು. ಹಾಗಾಗಿ ಸಂಶಯಾಸ್ವದ ಸೋಂಕಿತರನ್ನು ಆರೈಕೆ ಮಾಡುವವರು ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವ ವೈದ್ಯರು, ಸಿಬ್ಬಂದಿ ಮಾತ್ರವೇ ಮುಖಗವಸು ಬಳಸಲು ಕೋರಲಾಗಿದೆ.

ಕೊಕ್ಕೊ ಕ್ರೀಡಾಕೂಟ ಮುಂದೂಡಿ

ಕರೊನಾ ಸೋಂಕು, ದ್ವಿತೀಯ ಪಿಯುಸಿ ಪರೀಕ್ಷೆ, ಮೈದಾನ ಅಲಭ್ಯದ ಕಾರಣ ತುಮಕೂರಿನಲ್ಲಿ ನಡೆಯಬೇಕಿದ್ದ 65ನೇ ಎಸ್‌ಜಿಎಫ್‌ಐ ಬಾಲಕಿಯರ 19 ವರ್ಷದೊಳಗಿನ ರಾಷ್ಟ್ರಮಟ್ಟದ ಕ್ರೀಡಾಕೂಟ ಮುಂದೂಡುವಂತೆ ತುಮಕೂರು ಜಿಲ್ಲೆ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು