ಮೂಲಸೌಲಭ್ಯ ವಂಚಿತ ಸರ್ಕಾರಿ ಶಾಲೆ: ಪೋಷಕರ ದೂರು

ಶನಿವಾರ, ಮೇ 25, 2019
28 °C

ಮೂಲಸೌಲಭ್ಯ ವಂಚಿತ ಸರ್ಕಾರಿ ಶಾಲೆ: ಪೋಷಕರ ದೂರು

Published:
Updated:
Prajavani

ಹುಳಿಯಾರು: ಹೋಬಳಿಯ ಗಾಣಧಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರುಹೊಳೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮೂಲ ಸೌಕರ್ಯಗಳಿಂದ ವಂಚಿತವಾಗಿ ಮಕ್ಕಳು ಸಮಸ್ಯೆ ಎದುರಿಸುವಂತಾಗಿದೆ ಎಂದು ಪೋಷಕರು ದೂರಿದ್ದಾರೆ.

ಒಂದರಿಂದ 5ನೇ ತರಗತಿವರೆಗೆ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಮೂರು ಕೊಠಡಿಗಳು ಇದ್ದು ಒಂದು ಹೊಸದಾಗಿದೆ. ಇನ್ನೆರಡು ಕೊಠಡಿಗಳು ಶಿಥಿಲಗೊಂಡಿವೆ. ಎರಡರಲ್ಲಿ ಹೆಂಚುಗಳು ಒಡೆದು ಹೋಗಿದ್ದು ಮಳೆ ಬಂದರೆ ಸೋರುತ್ತವೆ.

ಬಿಸಿಲಿಗೆ ಮಕ್ಕಳು ಒಳಗೆ ಕುಳಿತುಕೊಳ್ಳಲು ಹಿಂಸೆ ಪಡುತ್ತಿದ್ದಾರೆ. ಕೊಠಡಿಯ ತೊಲೆಗಳು ಸಂಪೂರ್ಣ ಶಿಥಿಲವಾಗಿ ಯಾವಾಗ ಮುರಿದು ಬೀಳುತ್ತವೆ ಎಂಬ ಭಯದಿಂದ ಶಿಕ್ಷಕರು ಹಾಗೂ ಮಕ್ಕಳು ಪಾಠ ಕೇಳುವಂತಾಗಿದೆ. ಕೊಠಡಿಗಳು ಸುಣ್ಣ ಬಣ್ಣ ಕಂಡು ಎಷ್ಟೋ ವರ್ಷಗಳು ಕಳೆದಿವೆ. ಶೌಚಾಲಯ ಮತ್ತು ಕಾಂಪೌಂಡ್ ವ್ಯವಸ್ಥೆ ಇಲ್ಲ. ಸಂಬಂಧಪಟ್ಟ ಮೇಲಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ ಎಂದು ಶಾಲಾಭಿವೃದ್ಧಿ ಸಮಿತಿಯ ದುರ್ಗೇಶ್ ದೂರಿದ್ದಾರೆ.

ಸಂಬಂಧಪಟ್ಟವರು ಮುಂದಿನ ಶೈಕ್ಷಣಿಕ ವರ್ಷದ ಆರಂಭದ ವೇಳೆಗಾದರೂ ಸಮಸ್ಯೆ ಬಗೆಹರಿಸುವಂತೆ ಗ್ರಾಮಸ್ಥರಾದ ರಾಮಯ್ಯ, ಲೋಕೇಶ್, ಹಳೆ ವಿದ್ಯಾರ್ಥಿಗಳಾದ ವಿಜಯ್, ರಂಗಸ್ವಾಮಿ, ಸುಧೀಂದ್ರ, ಗಜೇಂದ್ರ, ಲೋಹಿತ್ ರಂಗಸ್ವಾಮಿ, ಹೇಮಂತ್, ಪಂಚಾಕ್ಷರಿ, ಸಂತೋಷ್ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !