ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮಗಳ ಅಭಿವೃದ್ಧಿಗೆ ಒತ್ತು

ಮೆಣಸಗಿ ಗ್ರಾಮದಲ್ಲಿ ನರಗುಂದ ಶಾಸಕ ಪಾಟೀಲ ಭರವಸೆ
Last Updated 16 ಜೂನ್ 2018, 8:04 IST
ಅಕ್ಷರ ಗಾತ್ರ

ಹೊಳೆಆಲೂರ (ರೋಣ): ಗ್ರಾಮಗಳ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ನರಗುಂದ ಶಾಸಕ ಸಿ.ಸಿ.ಪಾಟೀಲ ಹೇಳಿದರು. ಮೆಣಸಗಿ ಗ್ರಾಮದ ನವ ಗ್ರಾಮದಲ್ಲಿ ಗುರುವಾರ ಸಂಜೆ ಜರುಗಿದ ಹೊಳೆಆಲೂರ ಹೋಬಳಿ ಮಟ್ಟದ 28 ಗ್ರಾಮಗಳ ಬಿಜೆಪಿ ಕಾರ್ಯಕರ್ತರ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಮತದಾರರ ವಿಶ್ವಾಸಕ್ಕೆ ಧಕ್ಕೆಯಾಗದಂತೆ ನರಗುಂದ ಮತಕ್ಷೇತ್ರವನ್ನು ಜಿಲ್ಲೆಯಲ್ಲಿಯೇ ಮಾದರಿಯ ಕ್ಷೇತ್ರವನ್ನಾಗಿಸುವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಚುನಾವಣೆ ವೇಳೆ ಕೊಟ್ಟ ಮಾತಿನಂತೆ ರೈತರ ಸಾಲ ಮನ್ನಾ ಮತ್ತಿತರ ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸಬೇಕು. ಇಲ್ಲದಿದ್ದರೆ ಬಿಜೆಪಿ ಹೋರಾಟಕ್ಕೆ ಮುಂದಾಗುವುದು ಎಂದರು.

ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಬಿ.ಬಿ. ಸಕ್ರಿ ಮಾತನಾಡಿದರು.  ಎ.ಪಿ.ಕುಲಕರ್ಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿ.ವಿ.ಕೊಂಗವಾಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯರಾದ ಶಿವಕುಮಾರ ನೀಲಗುಂದ, ಪಡಿಯಪ್ಪ ಪೂಜಾರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರೇಮವ್ವ ನಾಯಕ, ಸದಸ್ಯ ಜಗದೀಶ ಬ್ಯಾಡಗಿ, ಶ್ರೀಪತಿ ಉಡುಪಿ, ಅಶೋಕ ಹೆಬ್ಬಳ್ಳಿ, ಅಶೋಕ ಹಿರೇಮಠ, ಮುತ್ತಣ್ಣ ಜಂಗಣ್ಣವರ, ನಾಗನಗೌಡ ಪಾಟೀಲ, ಹೇಮಾವತಿ ಕಡದಳಿ, ರೂಪಾ ಕುಲಕರ್ಣಿ, ಮಲ್ಲಪ್ಪ ಮೇಟಿ, ಸಂಪತ್‌ಕುಮಾರ್ ಕುಲಕರ್ಣಿ ಹಾಜರಿದ್ದರು.

ನೆರೆ ಹಾವಳಿಯಿಂದ ಆಸರೆ ಕಳೆದುಕೊಂಡು ಬೀದಿ ಪಾಲಾಗಿದ್ದ 14 ಗ್ರಾಮಗಳ ಜನರಿಗೆ ಮೂಲಸೌಲಭ್ಯ ಒದಗಿಸಲು ವಾರದೊಳಗೆ ಸಂಬಂಧಪಟ್ಟ ಅಧಿಕಾರಿಗಳ ಸಭೆ ಕರೆಯಲಾಗುವುದು
ಸಿ.ಸಿ. ಪಾಟೀಲ, ಶಾಸಕ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT