ತುಮಕೂರು: ಇರಾನ್– ಅಮೆರಿಕ ಯುದ್ಧ ವಿರೋಧಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ಜೀವ– ಜನಪರ ಸಂಘಟನೆಗಳಿಂದ ನಗರದ ಟೌನ್ಹಾಲ್ ಬಳಿ ಮಂಗಳವಾರ ರಾತ್ರಿ ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಲಾಯಿತು.

ಯುದ್ಧ ಪ್ರದೇಶಗಳಲ್ಲಿ ಇರುವ ಭಾರತೀಯರನ್ನು ಸುರಕ್ಷಿತವಾಗಿ ಕರೆ ತರಬೇಕು ಎಂದು ಪ್ರತಿಭಟನಾಕಾರರು ಮನವಿ ಮಾಡಿದರು.

ಪಿಯುಸಿಎಲ್ ಅಧ್ಯಕ್ಷ ಕೆ.ದೊರೈರಾಜ್, ‘ನಿಸರ್ಗದತ್ತವಾದ ಸಂಪನ್ಮೂಲ ಹೊಂದಿರುವ ದೇಶಗಳ ಮೇಲೆ ಸಾಮ್ರಾಜ್ಯಶಾಹಿ ರಾಷ್ಟ್ರಗಳು ತಮ್ಮ ಹಿಡಿತ ಸಾಧಿಸಲು, ಜನಾಂಗೀಯ ದ್ವೇಷ ಹುಟ್ಟು ಹಾಕುತ್ತಿವೆ. ಅಮಾಯಕರ ಹತ್ಯೆಗೆ ಇಳಿದಿವೆ. ಇಡೀ ಮಾನವ ಕುಲ ಇದನ್ನು ವಿರೋಧಿಸಬೇಕು’ ಎಂದು ಕರೆ ನೀಡಿದರು.

ಪರಿಸರವಾದಿ ಸಿ.ಯತಿರಾಜು, ‘ಸಾಮ್ರಾಜ್ಯಶಾಹಿ ಶಕ್ತಿಗಳು ತಮ್ಮ ಶಸ್ತ್ರಾಸ್ತ್ರಗಳ ಮಾರುಕಟ್ಟೆ ವಿಸ್ತರಣೆ ಮತ್ತು ಸ್ವಂತ ಲಾಭಕ್ಕಾಗಿ ಯುದ್ಧಗಳನ್ನು ಪ್ರಚೋದಿಸುತ್ತವೆ. ಈ ಭೂಮಿ ಎಲ್ಲರಿಗೂ ಸೇರಿದ್ದು, ಜನರ ನೆಮ್ಮದಿ ಹಾಳು ಮಾಡುವ ಯುದ್ಧ ನಿಲ್ಲಿಸಬೇಕು. ಜಾಗತಿಕ ಶಾಂತಿ ಚಳವಳಿ ಬೆಳೆದು ಬರಬೇಕು’ ಎಂದರು.

ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್, ‘ಯುದ್ಧಗಳು ಜಗತ್ತಿನಲ್ಲಿ ಸಂಕಟಗಳ ಸರಮಾಲೆ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಸೃಷ್ಟಿಸುತ್ತವೆ. ಎಲ್ಲೆಡೆ ವಿನಾಶಕ್ಕೆ ಕಾರಣವಾಗುತ್ತವೆ. ಕೇಂದ್ರ ಸರ್ಕಾರ ಅಲಿಪ್ತ ನೀತಿ ಕಡೆಗಣಿಸಿ ಯುದ್ಧಕೋರತನಕ್ಕೆ ಬೆಂಬಲ ನೀಡಬಾರದು’ ಎಂದು ಒತ್ತಾಯಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ಮಂಜುಳಾ, ಅನುಪಮಾ, ಕಂಬೇಗೌಡ, ರಂಗಧಾಮಯ್ಯ, ಶಿವಕುಮಾರಸ್ವಾಮಿ, ಕಲ್ಯಾಣಿ, ತಾಜುದ್ದೀನ್, ಟಿ.ಆರ್.ಕಲ್ಪನಾ, ಗಿರೀಶ್, ಅಶ್ವತ್ಥನಾರಾಯಣ ಗುಟ್ಟೆ, ಎ.ನರಸಿಂಹಮೂರ್ತಿ, ಕೆ.ವಿ.ಸತ್ಯನಾರಾಯಣ, ಪಿ.ಪ್ರಸಾದ್, ಟಿ.ಜಿ.ಶಿವಲಿಂಗಯ್ಯ, ಅಶ್ವತ್ಥಯ್ಯ, ಚಂದ್ರಶೇಖರ್, ಗೌರಮ್ಮ, ಜಬೀನಾ, ಖಲೀಲ್, ಮಾರುತಿ, ಶ್ರೀನಿವಾಸ್, ಸಾದಿಕ್, ಎಸ್.ರಾಘವೇಂದ್ರ, ಉಮರ್ ಫಾರೂಕ್ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.