ಕೊರಟಗೆರೆ: ಮನುಕುಲ ಇಂದು ಧರ್ಮದ ಹಾದಿ ಬಿಟ್ಟು ಬೇರೆಡೆ ಧಾವಂತದ ಹೆಜ್ಜೆ ಹಾಕುತ್ತಿರುವುದು ಆತಂಕಕಾರಿ ಎಂದು ಗೃಹ ಸಚಿವ ಜಿ.ಪರಮೇಶ್ವರ ತಿಳಿಸಿದರು.

ತಾಲ್ಲೂಕಿನ ಕೋಳಾಲ ಹೋಬಳಿ ಇರಕಸಂದ್ರ ಕಾಲೊನಿ ಬಳಿ ಎಲೆರಾಂಪುರ ಕುಂಚಿಟಿಗ ಮಠದ ಹನುಮಂತನಾಥ ಸ್ವಾಮೀಜಿ ವರ್ಧಂತಿಯಲ್ಲಿ ಅವರು ಮಾತನಾಡಿದರು.

ಮನುಷ್ಯ ತನ್ನನ್ನು ತಾನು ನಾಶ ಮಾಡಿಕೊಳ್ಳುವಂತಹ ವಿದ್ಯಮಾನಗಳು ನಡೆಯುತ್ತಿವೆ. ಒಂದೇ ನಿಮಿಷದಲ್ಲಿ ಇಡೀ ಮನುಕುಲವನ್ನೇ ನಾಶ ಮಾಡುವ ಪರಿಸ್ಥಿತಿಯಲ್ಲಿದ್ದೇವೆ ಎಂದರು.

ಮಠ ಮಾನ್ಯಗಳು ಸಂಸ್ಕಾರ ಕಲಿಸುವ ಕೇಂದ್ರಗಳಾಗಿವೆ. ಆಧುನಿಕ ಜಗತ್ತಿನಲ್ಲಿ ಎಲ್ಲವೂ ಇದೆ. ಆದರೆ ಸಂಸ್ಕಾರದ ಕೊರತೆ ಇರುವುದರಿಂದ ಮನುಷ್ಯ ದಾರಿ ತಪ್ಪುತ್ತಿದ್ದಾನೆ ಎಂದರು.

ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಂದು ಸತ್ಪ್ರಜೆಗಳನ್ನು ಕಾಣುವುದು ಕಷ್ಟವಾಗುತ್ತಿದೆ. ಸಮಾಜ ಶಾಂತಿಯುತವಾಗಿ ಜನರು ನೆಮ್ಮದಿಯ ಜೀವನ ಸಾಗಿಸಲು ಧರ್ಮದ ಮಾರ್ಗ ಅತ್ಯಗತ್ಯ ಎಂದರು.

ಕುಂಚಿಟಿಗ ಮಠದ ಹನುಮಂತನಾಥ ಸ್ವಾಮೀಜಿ ಮಾತನಾಡಿ, ಸ್ವಾಮೀಜಿಗಳ ಹುಟ್ಟುಹಬ್ಬದ ಶುಭಾಶಯ ಕೋರುವ ಫ್ಲೆಕ್ಸ್ ಹಾಕುವುದು ಬೇಡ. ಅದರಿಂದ ಪರಸರ ಹಾಳಾಗಲಿದೆ. ಅಂತಹುಗಳಿಗೆ ಖರ್ಚು ಮಾಡುವ ಹಣವನ್ನು ಬಡ ವಿದ್ಯಾರ್ಥಿಗಳ ವಿಧ್ಯಾಭ್ಯಾಸಕ್ಕೆ ಖರ್ಚು ಮಾಡಿ. ಅದು ಇನ್ನೊಬ್ಬರ ಬಾಳು ಬೆಳಗುವಂತಾಗುತ್ತದೆ. ಜೊತಗೆ ನಿಮ್ಮ ಶ್ರಮದ ಹಣಕ್ಕೆ ಸಾರ್ಥಕತೆ ದೊರೆಯುತ್ತದೆ ಎಂದರು.

ಪರಮೇಶ್ವರ ಅನೇಕ ಬಾರಿ ಮುಖ್ಯಮಂತ್ರಿ ಸ್ಥಾನದ ಸನಿಹಕ್ಕೆ ಬಂದು ವಾಪಸ್ಸಾಗಿದ್ದಾರೆ. ಈ ಬಾರಿ ಅವರು ಮುಖ್ಯಮಂತ್ರಿ ಆಗುವ ಮೂಲಕ ಜಿಲ್ಲೆಗೆ ಮುಖ್ಯಮಂತ್ರಿ ಅವಕಾಶ ಸಿಗುವಂತಾಗಬೇಕು. ಈಗ ಆ ಸ್ಥಾನಕ್ಕೆ ಪರಮೇಶ್ವರ ಸಮರ್ಥರಿದ್ದಾರೆ. ವಿದ್ಯಾವಂತರಾಗಿರುವ ಕಾರಣ ಅವರು ಮುಖ್ಯಮಂತ್ರಿಯಾದರೆ ರಾಜ್ಯದಲ್ಲಿ ಇನ್ನಷ್ಟು ಹೊಸ ಹೊಸ ಯೋಜನೆ ಅನುಷ್ಠಾನಗೊಳಿಸುವ ಸಾಮರ್ಥ್ಯ ಅವರಲಿದೆ. ಈ ಅವಧಿ ಮುಗಿಯುವದರ ಒಳಗಾಗಿ ಅವರು ಮುಖ್ಯಮಂತ್ರಿ ಆಗಬೇಕು ಎಂದು ಆಶಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಜಿ.ಪ್ರಭು, ಎಸ್ಪಿ ಕೆ.ವಿ.ಅಶೋಕ್, ತಹಶೀಲ್ದಾರ್ ಕೆ.ಮಂಜುನಾಥ, ತಾ.ಪಂ. ಇಒ ಅಪೂರ್ವ ಅನಂತರಾಮು, ಮುರಳೀಧರ ಹಾಲಪ್ಪ, ಜಿ.ಆರ್.ಶಿವರಾಮಯ್ಯ, ಎಸ್.ಕೆ.ನಾಗರಾಜು, ಎಚ್.ಕೆ.ಮಹಾಲಿಂಗಪ್ಪ, ಎ.ಡಿ.ಬಲರಾಮಯ್ಯ, ಜಿ.ಎಸ್.ರವಿಕುಮಾರ್, ತೀತಾ ರವಿವರ್ಮ, ಉಮೇಶ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.