ಗುರುವಾರ , ಡಿಸೆಂಬರ್ 5, 2019
26 °C

ಹೋರಾಟ ತಾತ್ಕಾಲಿಕ ಅಂತ್ಯ| ಕುರುಬ ಸಮುದಾಯದ ವಿರುದ್ಧ ಹೇಳಿಕೆ ನೀಡಿದರೆ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಕುರುಬ ಸಮುದಾಯದ ವಿರುದ್ಧ ಇದೇ ರೀತಿ ಹೇಳಿಕೆ ಮುಂದುವರಿಸಿದರೆ ಜಿಲ್ಲಾ ಬಂದ್‌ಗೆ ಕರೆ ನೀಡಲಾಗುವುದು ಎಂದು ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಎಂ.ರಾಮಚಂದ್ರಪ್ಪ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಪದೇ ಪದೇ ಕುರುಬ ಸಮುದಾಯ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ.‌ಈ ಹಿಂದೆ ಜಿಲ್ಲೆಯಲ್ಲಿ ಬಿಜೆಪಿ ಮುಖಂಡರಾದ ಸೊಗಡು ಶಿವಣ್ಣ, ಬಿ.ಸುರೇಶ್ ಗೌಡ ಅವರು ಸಮುದಾಯದ ವಿರುದ್ಧ ಹೇಳಿಕೆ ನೀಡಿದ್ದಾರೆ. ಈಗ ಮಾಧುಸ್ವಾಮಿ ನೀಡಿದ್ದರು. ಹುಳಿಯಾರಿನ ಕನಕ ವೃತ್ತ ವಿವಾದ ಸುಖಾಂತ್ಯ ಕಂಡಿದೆ. ಆದರೆ ಮಾಧುಸ್ವಾಮಿ ಬಹಿರಂಗ ಕ್ಷಮೆಯಾಚಿಸಬೇಕಿತ್ತು ಎಂದರು.

ಕುರುಬ ಸಮುದಾಯವನ್ನು ಸಂಘಟಿಸಲು ಮತ್ತು ಸಮುದಾಯದವರ ವಿರುದ್ಧ ಹೇಳಿಕೆ ನೀಡದಂತೆ ಎಚ್ಚರಿಕೆ ರವಾನಿಸಲು ಜಿಲ್ಲೆಯಲ್ಲಿ ಸಮುದಾಯದಿಂದ ಜಾಗೃತಿ ಸಮಾವೇಶ ನಡೆಸಲಾಗುವುದು ಎಂದು ಹೇಳಿದರು.

ಪ್ರತಿಕ್ರಿಯಿಸಿ (+)