ಕೊಡಿಗೇನಹಳ್ಳಿ: ಜಯಮಂಗಲಿ ನದಿಯಲ್ಲಿ ಮಂಗಳವಾರ ಕೆಲವರು ಟ್ರ್ಯಾಕ್ಟರ್ಗಳಲ್ಲಿ ಮರಳು ತುಂಬುತ್ತಿದ್ದುದ್ದನ್ನು ಕಂಡು ಸ್ಥಳಕ್ಕೆ ಬಂದ ಸ್ಥಳೀಯರು ವಾಹನಗಳನ್ನು ತಡೆದರು.

ಮರಳು ಸಾಗಾಟದಿಂದ ಕೊಳವೆ ಬಾವಿಗಳ ನೀರು ಖಾಲಿಯಾಗಿದೆ. ಕುಡಿಯಲು, ಕೃಷಿ ಚಟುವಟಿಕೆಗಳಿಗೆ ನೀರಿಲ್ಲದಂತಾಗಿದ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಯಮಂಗಲಿ ಕೊರಟಗೆರೆ ಮತ್ತು ಮಧುಗಿರಿ ಭಾಗದ ಜನರ ಜೀವನಾಡಿ. ಶಾಶ್ವತ ನೀರಾವರಿ ಸೌಕರ್ಯಗಳಿಲ್ಲದ ಈ ಪ್ರದೇಶದಲ್ಲಿ ಮಳೆಯೂ ಅಪರೂಪ. ಬರದ ಛಾಯೆ ಆವರಿಸಿದೆ. ಇಂತಹ ಸ್ಥಿತಿಯಲ್ಲಿ ಕೆಲವರು ಕದ್ದುಮುಚ್ಚಿ ಜಯಮಂಗಲಿ ನದಿಯಲ್ಲಿ ಮರಳನ್ನು ತೆಗೆಯುತ್ತಿದ್ದಾರೆ. ಪ್ರಶ್ನಿಸಿದರೆ ಬೆದರಿಸುತ್ತಾರೆ. ನದಿಪಾತ್ರದ ಜನರು ಈ ನದಿಯನ್ನೇ ನಂಬಿ ಬದುಕುತ್ತಿದ್ದಾರೆ. ಆದರೆ ಕೆಲವರು ಇದೇ ವೃತ್ತಿ ಮಾಡಿಕೊಂಡು ಮರಳನ್ನು ದೂರದ ಗ್ರಾಮಗಳಿಗೆ ಸಾಗಿಸಿ ನದಿಯನ್ನು ಬರಡು ಮಾಡುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಿ ಸೂಕ್ತಕ್ರಮ ಜರುಗಿಸಬೇಕು ಎಂದು ಸ್ಥಳೀಯರಾದ ಕೇಶವ, ನಂಜುಂಡಪ್ಪ, ಶಿವಣ್ಣ, ಮುಳಭದ್ರಪ್ಪ, ಯುವರತ್ನ, ಹರ್ಷ, ಬಾಲು, ಅಶ್ವತ್ಥಪ್ಪ, ರವಿ ಒತ್ತಾಯಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-17-533162668

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.