ಗುರುವಾರ , ನವೆಂಬರ್ 14, 2019
23 °C
ಸಚಿವ ಜೆ.ಸಿ.ಮಾಧುಸ್ವಾಮಿಕಿಡಿ

ಪರಿಹಾರ ಕಾಂಗ್ರೇಸ್‍ನವರಿಗೆ ನೀಡಬೇಕೆ?

Published:
Updated:

ಗುಬ್ಬಿ: ನೆರೆ ಪರಿಹಾರ ನೀಡುವಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಧೋರಣೆ ಮಾಡಿದೆ ಎಂದು ಪ್ರತಿಭಟಿಸುತ್ತಿರುವ ಕಾಂಗ್ರೇಸ್‌ನವರಿಗೆ ನೆರೆ ಪರಿಹಾರ ನೀಡಬೇಕೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಪ್ರತಿಭಟನಾಕಾರರ ವಿರುದ್ಧ ಕಿಡಿಕಾರಿದರು.

ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನೆರೆಗೆ ತುತ್ತಾಗಿರುವ ಸಂತ್ರಸ್ತರು ಯಾರು ಸಹ ಪರಿಹಾರ ನೀಡಿ ಎಂದು ಮಾಧ್ಯಮಗಳ ಮುಂದೆ ಬಂದಿಲ್ಲ. ಆದರೆ, ಕಾಂಗ್ರೆಸ್ ಕಾರ್ಯಕರ್ತರು ಪರಿಹಾರ ನೀಡಿ ಎಂದು ಬೊಬ್ಬೆ ಹೊಡೆದುಕೊಳ್ಳುತ್ತಿದ್ದಾರೆ’ ಎಂದು ದೂಷಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೆರೆ ಪೀಡಿತ ಪ್ರದೇಶಗಳನ್ನು ಸಮೀಕ್ಷೆ ಮಾಡಿದೆ ಸೂಕ್ತ ಪರಿಹಾರ ನೀಡಲು ನೆರೆ ಸಂತ್ರಸ್ತರಿಗೆ ಸಂಬಂಧಿಸಿದ ದಾಖಲೆಗಳು ಮತ್ತು ಭೂ ದಾಖಲೆಗಳಲ್ಲಿ ಕೆಲವು ದೋಷಗಳಿವೆ. ಅವವುಗಳನ್ನು ಪರಿಶೀಲನೆ ಮಾಡಲು ತಾಂತ್ರಿಕ ಸಮಸ್ಯೆಗಳಿರುವುದರಿಂದ ಶಾಶ್ವತ ಪರಿಹಾರ ನೀಡುವಲ್ಲಿ ವಿಳಂಬವಾಗುತ್ತಿದೆ ಹಾಗೂ ಸಂತ್ರಸ್ತರಿಗೆ ಅಗತ್ಯವಿರುವ ತಾತ್ಕಾಲಿಕ ಪರಿಹಾರ ನೀಡಿದ್ದೇವೆ. ಇದು ಕಾಂಗ್ರೆಸ್ಸಿಗರಿಗೆ ಕಾಣುತ್ತಿಲ್ಲ ತಿರುಗೇಟು ನೀಡಿದರು.

ಅಡಿಕೆ ಬೆಳೆಗಾರರಿಗೆ ವಿಮೆಯ ಸೌಲಭ್ಯ ನೀಡುವಲ್ಲಿ ವಿಳಂಬವಾಗಿರುವುದು ಮತ್ತು 2900 ರೈತರಿಗೆ ಬಾಕಿ ಇರುವ ಬೆಳೆ ಪರಿಹಾರವನ್ನು ಶೀಘ್ರವಾಗಿ ನೀಡಿವಂತೆ ಸೂಚಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಪತ್ರೆ ದಿನೇಶ್, ಕಿಡಿಗಣ್ಣಪ್ಪ, ದಿಲೀಪ್ ಕುಮಾರ್, ಚಂದ್ರಶೇಖರ್ ಬಾಬು, ಅ.ನ.ಲಿಂಗಪ್ಪ, ಬೆಟ್ಟಸ್ವಾಮಯ್ಯ, ಕೃಷ್ಣಪ್ಪ, ಜಿ.ಸಿ.ಶಿವಕುಮಾರ್, ಗುರು ಹಾಗೂ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)