ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

6ರಂದು ಉದ್ಯೋಗ ಮೇಳ

Published 4 ಆಗಸ್ಟ್ 2024, 5:46 IST
Last Updated 4 ಆಗಸ್ಟ್ 2024, 5:46 IST
ಅಕ್ಷರ ಗಾತ್ರ

ತುಮಕೂರು: ಹಾಲಪ್ಪ ಪೌಂಡೇಷನ್‌ ವತಿಯಿಂದ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆ. 6ರಂದು ಉದ್ಯೋಗ ಮೇಳ ಏರ್ಪಡಿಸಲಾಗಿದೆ.

‘ಕೌಶಲ ಕರ್ನಾಟಕ, ಉದ್ಯೋಗ ವಿನಿಮಯ ಕಚೇರಿ, ಕೆಎಸ್‌ಎಫ್‌ಸಿ, ಎಸ್‌ಬಿಐ, ಸಿಡಾಕ್, ಕೆಎಸ್‍ಎಸ್‍ಐಡಿಸಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಕೆಐಎಡಿಬಿ ಸಹಯೋಗದಲ್ಲಿ ಮೇಳ ಆಯೋಜಿಸಲಾಗಿದೆ. ರಾಜ್ಯದ ವಿವಿಧೆಗಳಿಂದ 37 ಕಂಪನಿಗಳು ಭಾಗವಹಿಸಲಿವೆ. ಆಸಕ್ತ ವಿದ್ಯಾರ್ಥಿಗಳ ಸಂದರ್ಶನ ನಡೆಸಿ, ತರಬೇತಿ, ಅಪ್ರೆಂಟಿಸ್‌, ನೇರ ಆಯ್ಕೆ ಸಹ ಮಾಡಿಕೊಳ್ಳಲಿವೆ’ ಎಂದು ಹಾಲಪ್ಪ ಪೌಂಢೇಷನ್ ಅಧ್ಯಕ್ಷ ಮುರಳೀಧರ ಹಾಲಪ್ಪ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.

‘ನಮ್ಮ ಸಂಸ್ಥೆಯಿಂದ ಕೈಗೊಳ್ಳುವ ವಿವಿಧ ಕೌಶಲ ತರಬೇತಿಗೆ ಹೆಸರು ನೋಂದಾಯಿಸಿಕೊಳ್ಳಲು ಎರಡು ಪೋರ್ಟಲ್‌ ಪ್ರಾರಂಭಿಸಲಾಗಿದೆ. ಉದ್ಯೋಗ ಮೇಳಕ್ಕೆ ಹಾಜರಾಗುವ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬಹುದು’ ಎಂದು ಕೌಶಲ ಕರ್ನಾಟಕದ ಅಧಿಕಾರಿ ಕೆಂಪಯ್ಯ ಮಾಹಿತಿ ನೀಡಿದರು.

‘ಇದುವರೆಗೂ ಜಿಲ್ಲೆಯ 6 ಸಾವಿರ ಜನ ಯುವ ನಿಧಿಗೆ ನೋಂದಣಿ ಮಾಡಿಕೊಂಡಿದ್ದು, ಇವರಲ್ಲಿ 4,200 ಮಂದಿಗೆ ಹಣ ಬರುತ್ತಿದೆ. ದಾಖಲಾತಿ ಕೊರತೆಯಿಂದ ಕೆಲವರ ಖಾತೆಗೆ ಹಣ ವರ್ಗಾವಣೆಯಾಗಿಲ್ಲ’ ಎಂದು ಉದ್ಯೋಗ ವಿನಿಮಯ ಕಚೇರಿ ಅಧಿಕಾರಿ ಕಿಶೋರ್‌ಕುಮಾರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT