ಭಾನುವಾರ, ಸೆಪ್ಟೆಂಬರ್ 22, 2019
28 °C
ಅನನ್ಯ ಇನ್‌ಸ್ಟಿಟ್ಯೂಟ್ ಆಯೋಜಿಸಿದ್ಧ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಯೋಧ ನವೀನ್ ನಾಗಪ್ಪ ಕರೆ

ಸೇನೆಗೆ ಸೇರಿದರೆ ದೇಶದ ಋಣ ತೀರಿಸಲು ಸಾಧ್ಯ

Published:
Updated:
Prajavani

ತುಮಕೂರು: ’ಸೇನೆಗೆ ಸೇರಿದರೆ ಮಾತ್ರ ದೇಶದ ಋಣ ತೀರಿಸಲು ಸಾಧ್ಯ. ಯುವಕರು ಸೇನೆ ಸೇರಲು ಉತ್ಸುಕತೆ ತೋರಿಸಬೇಕು’ ಎಂದು ನಿವೃತ್ತ ಯೋಧರಾದ ನವೀನ್ ನಾಗಪ್ಪ ಕರೆ ನೀಡಿದರು.

ಗುರುವಾರ ನಗರದ ಅನನ್ಯ ಇನ್‌ಸ್ಟಿಟ್ಯೂಟ್ ಅಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್ ಸಂಸ್ಥೆಯು ಆಯೋಜಿಸಿದ್ಧ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

’ಆಸಾಧ್ಯವಾದುದು ಯಾವುದೂ ಇಲ್ಲ. ದೃಢಸಂಕಲ್ಪ ಇದ್ದರೆ ಸದಾ ಗುರಿ ಸಾಧಿಸಬಹುದು. ಸಮಾಜವು ಸೈನಿಕರನ್ನು ಗೌರವದಿಂದ ಕಾಣಬೇಕು’ ಎಂದು ಹೇಳಿದರು.

ಅನನ್ಯ ಟ್ರಸ್ಟ್‌ನ ಉಪಾಧ್ಯಕ್ಷ ಬಿ.ಆರ್. ಉಮೇಶ್ ಮಾತನಾಡಿ, ‘ ಶಿಕ್ಷಕರು ವಿದ್ಯಾರ್ಥಿಗಳಿಗೆ ಜ್ಞಾನ ನೀಡಿ ದಾರಿದೀಪವಾಗುತ್ತಾರೆ’ ಎಂದು ನುಡಿದರು.

ನಿವೃತ್ತ ಪ್ರಾಧ್ಯಾಪಕ ಬಿ.ಎಸ್.ಲಿಂಗರಾಜು, ಪ್ರಾಧ್ಯಾಪಕ ಎಂ.ಎಸ್.ಶಂಕರ್ ಅವರನ್ನು ಸನ್ಮಾನಿಸಲಾಯಿತು.

ತುಮಕೂರು ಪೂರ್ವ ಇನ್ನರ್‌ವ್ಹೀಲ್ ಕ್ಲಬ್‌ನ ಅಧ್ಯಕ್ಷರಾದ ಕಲ್ಪನಾ ಮಹೇಶ್‌, ಕಾರ್ಯದರ್ಶಿ ದರ್ಶನ್ ಜೈನ್ ಮತ್ತು ಸದಸ್ಯರು, ಕಾಲೇಜಿನ ಪ್ರಾಂಶುಪಾಲ ಡಾ.ಎಂ.ವಿಶ್ವಾಸ್ ಇದ್ದರು.

 

Post Comments (+)