ಪ್ರಪಾತದಿಂದ ಶವ ಮೇಲೆತ್ತಿದ ಜೋತಿರಾಜ್‌ ತಂಡ

7
ಜೋತಿರಾಜ್‌ ನೇತೃತ್ವದಲ್ಲಿ ಸತತ 8 ತಾಸು ಕಾರ್ಯಾಚರಣೆ ಬಳಿಕ ಶವ ಪತ್ತೆ

ಪ್ರಪಾತದಿಂದ ಶವ ಮೇಲೆತ್ತಿದ ಜೋತಿರಾಜ್‌ ತಂಡ

Published:
Updated:
Deccan Herald

ಮಧುಗಿರಿ: ಏಕಾಶಿಲಾ ಬೆಟ್ಟಕ್ಕೆ ಚಾರಣ ಕೈಗೊಂಡು ಪ್ರಪಾತಕ್ಕೆ ಬಿದ್ದಿದ್ದ ವ್ಯಕ್ತಿಯ ದೇಹವನ್ನು ಗುರುವಾರ ಹೊರ ತೆಗೆಯಲಾಯಿತು.

ತಾಲ್ಲೂಕಿನ ತುಂಗೋಟಿ ಗ್ರಾಮದ ರಂಗಶಾಮಯ್ಯ ಅವರ ಪುತ್ರ ಹನುಮಂತರಾಜು (45) ಮೃತಪಟ್ಟ ವ್ಯಕ್ತಿ. ಈ ವ್ಯಕ್ತಿ ಬಿದ್ದಿದ್ದನ್ನು ಕಂಡವರು 250 ಅಡಿಯಿಂದ ಬಿದ್ದಿದ್ದ ಎಂದು ಹೇಳಿದ್ದರು. ಆದರೆ, ಆತ 250 ಮೀಟರ್ ಪ್ರಪಾತಕ್ಕೆ ಬಿದ್ದಿದ್ದು, ಶವ ಹೊರ ತೆಗೆದಾಗ ಗೊತ್ತಾಗಿದೆ. ಬೆಟ್ಟದ ಮೇಲಿನಿಂದ ಬಿದ್ದಿರುವುದರಿಂದ ಮುಖ ಹಾಗೂ ತಲೆ ಭಾಗಕ್ಕೆ ಪೆಟ್ಟು ಬಿದ್ದಿದೆ ಎಂದು ಪೊಲೀಸರು ಹೇಳಿದರು.

ಬೆಳಿಗ್ಗೆ 5 ಗಂಟೆಯಿಂದಲೇ ಕಾರ್ಯಾಚರಣೆ ಆರಂಭಿಸಲಾಗಿತ್ತು. ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ, ಚಿತ್ರದುರ್ಗದ ಜೋತಿರಾಜ್ ಹಾಗೂ ಯುವಕರ ತಂಡದ ಶ್ರಮದಿಂದಾಗಿ ಸತತ 8 ತಾಸು ಕಾರ್ಯಾಚರಣೆ ನಡೆಸಿ ಶವ ತೆಗೆಯಲಾಯಿತು. ಬಳಿಕ ಏಕಾಶಿಲಾ ಬೆಟ್ಟದಿಂದ ಕೆಳಗೆ ತರಲಾಯಿತು.

ವಿಶೇವಾಗಿ ಜೋತಿರಾಜ್  ಅವರು ಹಗ್ಗದ ಸಹಾಯದಿಂದ ಘಟನಾ ಸ್ಥಳಕ್ಕೆ ತೆರಳಿ, ಮೃತ ದೇಹಕ್ಕೆ ಹಗ್ಗ ಕಟ್ಟಿ 500 ಅಡಿಗಳ ಮೇಲಕ್ಕೆ ಎಳೆದರು. ಈ ಕಾರ್ಯಕ್ಕೆ 22 ಮಂದಿಯನ್ನು ಬಳಸಿಕೊಳ್ಳಲಾಯಿತು.

ಜೋತಿರಾಜ್‌ ಕಾರ್ಯಕ್ಕೆ ಮೆಚ್ಚುಗೆ:

ಜೋತಿರಾಜ್ ತಮ್ಮ ಪ್ರಾಣವನ್ನು ಲೆಕ್ಕಿಸದೆ 250 ಮೀಟರ್ ಆಳವಿರುವ ಅಪಾಯದ ಸ್ಥಳಕ್ಕೆ ತೆರಳಿ ಮೃತದೇಹವನ್ನು ಬೆಟ್ಟದ ಮೇಲೆಕ್ಕೆ ತರಲು ಶ್ರಮಿಸಿದಕ್ಕೆ ಮಧುಗಿರಿ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.

ಜೋತಿರಾಜ್ ತಮ್ಮ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಇಳಿಯುತ್ತಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ಜನ ಸೆರೆ ಹಿಡಿದುಕೊಳ್ಳುತ್ತಿದ್ದರು. ಬೆಟ್ಟದಿಂದ ಕೆಳಗೆ ಬಂದ ಅವರ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಯುವಕರು ಮುಗಿ ಬಿದ್ದರು. ರಕ್ಷಣೆ ನೀಡಲು ಪೊಲೀಸರು ಬಿಗಿ ಬಂದೊಬಸ್ತ್ ಕೈಗೊಂಡಿದ್ದರು.

ಮಧುಗಿರಿ ಜಭಿಯನ್ನು ಹೊಗಳಿದ ಜ್ಯೋತಿರಾಜ್: ಮೃತ ದೇಹವನ್ನು ಮೇಲಕ್ಕೆತ್ತಲು ಸಹಾಯ ಮಾಡಿದ ಮಧುಗಿರಿಯ ಜಭಿಯ ಶ್ರಮ ಸಾಕಷ್ಟಿದೆ. ಅಪಾಯದ ಸ್ಥಳದಲ್ಲಿ ಧೈರ್ಯವಾಗಿ ಮುನ್ನುಗ್ಗಿ ಸಹಾಯ ಮಾಡಿದರು ಎಂದು ಜೋತಿರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಾಚರಣೆಯಲ್ಲಿ ಡಿವೈಎಸ್ಪಿ ಒ.ಬಿ.ಕಲ್ಲೇಶಪ್ಪ, ಸಿಪಿಐ ಎಂ. ಅಂಬರೀಷ್‌, ಪಿಎಸ್ಐ ಪಾಲಾಕ್ಷಪ್ರಭು, ಮೋಹನ್, ಸಿಬ್ಬಂದಿ ಮಲ್ಲಿಕಾರ್ಜುನ್, ಮಧು, ತೇಜು, ಬೋರೇಗೌಡ, ಗಿರೀಶ್, ಜಯಸಿಂಹ, ಅಗ್ನಿಶಾಮಕ ಸಿಬ್ಬಂದಿ ಅಣ್ಣಪ್ಪ ಗದಗಿ, ಡಿ.ಕೆ.ಕಾಂತರಾಜು, ರಾಘವೇಂದ್ರ, ರಾಚಪ್ಪ, ಮಂಜುನಾಥ್, ಯುವ ಮುಖಂಡರಾದ ಜಭಿ, ಆನಂದ್ ಇದ್ದರು.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !