ಕಲ್ಲೂರು (ಗುಬ್ಬಿ): ಗುಬ್ಬಿ ತಾಲ್ಲೂಕು ಕಡಬ ಹೋಬಳಿಯ ಕಲ್ಲೂರು ಗ್ರಾಮದಲ್ಲಿ ಗುರುವಾರ ಗಂಗಾಮತ ಬೆಸ್ತರ ಸುಮುದಾಯದ ವತಿಯಿಂದ ಗಂಗಾ ಸಪ್ತಮಿ ಆಚರಿಸಲಾಯಿತು.

ಗಂಗಾಪರಮೇಶ್ವರಿ ಚಿತ್ರ ಇಟ್ಟು, ಹಸಿರು ಚಪ್ಪರ ಹಾಕಿ ಸಮುದಾಯದ ಸಂಕೇತವಾದ ಮೀನಿನ ಬಲೆ ಹಾಗೂ ಮೀನುಗಳಿಂದ ಮಾಡಿದ ಹಾರಗಳಿಂದ ಚಪ್ಪರವನ್ನು ಅಲಂಕರಿಸಲಾಗಿತ್ತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸೋಮಶೇಖರ್, ಅನೇಕ ತಲೆಮಾರುಗಳಿಂದ ಗಂಗೆಯನ್ನು ನಂಬಿ ಬದುಕು ಕಟ್ಟಿಕೊಂಡಿರುವ ಗಂಗಾಮತಸ್ಥರು ಗಂಗಾಪರಮೇಶ್ವರಿಯನ್ನು ಆರಾಧಿಸಬೇಕು ಎಂದರು.

ವೆಂಕಟೇಶ್. ಕೆ. ಟಿ ಮಾತನಾಡಿ, ಕ್ಷಮೆಗೆ ಮತ್ತೊಂದು ಹೆಸರು ಗಂಗಾಮಾತೆ. ಸಮುದಾಯದವರು ಒಗ್ಗಟ್ಟಿನಿಂದ ಇದ್ದಲ್ಲಿ ಸಮುದಾಯದ ಅಭಿವೃದ್ಧಿ ಸಾಧ್ಯ ಎಂದರು.

ಈ ಕಾರ್ಯಕ್ರಮದಲ್ಲಿ ಮುಖಂಡ ಚೆನ್ನಮಲ್ಲಯ್ಯ, ಅರುಣ್ ಕುಮಾರ್ ಶಿವಣ್ಣ, ತಾತಯ್ಯ, ನಾಗರಾಜ್, ದಯಾನಂದ, ಸುರೇಶ್, ಅಶೋಕ್, ಪಾಂಡು, ಮುದ್ರೆ ಲಕ್ಷ್ಮಣಪ್ಪ, ಹೋಟೆಲ್ ಶಿವರಾಜು, ರತ್ನಮ್ಮ, ಸುಶ್ಮಿತ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-17-1784427332

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.