ಮಂಗಳವಾರ, ಆಗಸ್ಟ್ 20, 2019
27 °C

ಸಂತ್ರಸ್ಥರಿಗಾಗಿ ಮಿಡಿದ ಮನಗಳು

Published:
Updated:

ತುಮಕೂರು: ರಾಜ್ಯದಲ್ಲಿ ತಲೆದೂರಿರುವ ನೆರೆಗೆ ಜಿಲ್ಲೆಯ ಜನ–ಮನಗಳು ಮಿಡಿಯುತ್ತಿವೆ. ಸಂತ್ರಸ್ತರಿಗೆ ಕೈಲಾದ ಸಹಾಯಹಸ್ತವನ್ನು ಚಾಚುತ್ತಿವೆ.

ಗುಬ್ಬಿ ತಾಲ್ಲೂಕಿನ ಬಾಗೂರಿನ ನಿವಾಸಿ ಪಿ.ಎಸ್.ರುದ್ರಯ್ಯ ಅವರು ನೆರೆ ಸಂತ್ರಸ್ಥರಿಗಾಗಿ ₹ 2 ಲಕ್ಷ ಚೆಕ್‌ ಅನ್ನು ಮುಖ್ಯಮಂತ್ರಿ ನಿಧಿಗೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗೆ ನೀಡಿದರು.

ತುಮಕೂರಿನ ಚಿಕ್ಕಪೇಟೆಯಲ್ಲಿರುವ ಹಿರೇಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಹ ಸಂತ್ರಸ್ಥರಿಗಾಗಿ ₹ 1 ಲಕ್ಷದ ಚೆಕ್‌ ಅನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ರವಾನಿಸಿದರು.

ಕುಣಿಗಲ್ ರಸ್ತೆಯ ರಾಮಕೃಷ್ಣ ನಗರದಲ್ಲಿರುವ ಶಿರಡಿ ಸಾಯಿನಾಥ ಸೇವಾ ಸಮಿತಿಯು 25 ಕ್ವಿಂಟಾಲ್ ಅಕ್ಕಿ, ಬಿಸ್ಕೆಟ್‌ ಬಾಕ್ಸ್‌ಗಳನ್ನು ರೆಡ್‍ಕ್ರಾಸ್ ಸಂಸ್ಥೆ ಮೂಲಕ ಪ್ರವಾಹ ಪೀಡಿತ ಪ್ರದೇಶಗಳಿಗೆ ರವಾನಿಸಿದರು.

ಕ್ಯಾತ್ಸಂದ್ರದ ಸನ್ ರೈಸ್ ಸೌಹಾರ್ದ-ಪತ್ತಿನ ಸಹಕಾರ ಸಂಘ ಹಾಗೂ ಸ್ನೇಹಿತರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ನೆರೆ ಸಂತ್ರಸ್ತರಿಗೆ 25,000 ಚಪಾತಿ, ಬಿಸ್ಕೆಟ್, ನೀರಿನ ಬಾಟಲಿಗಳು, ಚಾಪೆ, ಹೊದಿಕೆ, ಉಡುಪುಗಳು, 5 ಪ್ಯಾಕೆಟ್ ಅಕ್ಕಿ, ಔಷಧಿ ಸೇರಿದಂತೆ ಸಾಮಾಗ್ರಿಗಳನ್ನು ರವಾನಿಸಿದರು. ಈ ಸರಕುಗಳನ್ನು ಹೊತ್ತ ವಾಹನಕ್ಕೆ ಎಸ್‍ಐಟಿ ಆವರಣದಿಂದ ಶಾಸಕ ಜ್ಯೋತಿಗಣೇಶ್ ಚಾಲನೆ ನೀಡಿದರು.

Post Comments (+)