ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುರುವೇಕೆರೆ: 7ರಿಂದ ಕೆಂಪಮ್ಮ ಜಾತ್ರೆ ಆರಂಭ

Last Updated 29 ಮಾರ್ಚ್ 2023, 5:58 IST
ಅಕ್ಷರ ಗಾತ್ರ

ತುರುವೇಕೆರೆ: ತಾಲ್ಲೂಕಿನ ದಬ್ಬೇಘಟ್ಟ ಹೋಬಳಿಯ ಕಾಡಸೂರು ಗ್ರಾಮದ ಕೆಂಪಮ್ಮ ದೇವಿ ಜಾತ್ರಾ ಮಹೋತ್ಸವವು ಏ. 7 ಹಾಗೂ 8ರಂದು ಅದ್ದೂರಿಯಾಗಿ ನಡೆಯಲಿದೆ.

ಶುಕ್ರವಾರರಂದು ಬೆಳಿಗ್ಗೆ 9 ರಿಂದ 10ಗಂಟೆಯೊಳಗೆ ಸಲ್ಲುವ ಶುಭ ಮಹೂರ್ತದಲ್ಲಿ ರಥೋತ್ಸವದ ಅಂಗವಾಗಿ ಧ್ವಜಾರೋಹಣ, ದೇವಿಗೆ ಅಭಿಷೇಕ, ನವಗ್ರಹ ಪೂಜೆ, ಸಹಸ್ರನಾಮ, ಕುಂಕುಮಾರ್ಚನೆ, ಪೂಜಾ ಕಾರ್ಯಕ್ರಮ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗವಿದೆ.

ರಾತ್ರಿ 10ಗಂಟೆಗೆ ದೇವಿಗೆ ಪುಷ್ಪ ಮಂಟಪೋತ್ಸವ, ವಿದ್ಯುತ್ ದೀಪಾಲಂಕಾರ, ಇತರೆ ಮನರಂಜನಾ ಕಾರ್ಯಕ್ರಮಗಳು ಮದ್ದಿನ ಸೇವೆಯೊಡನೆ ಜರುಗಲಿವೆ.

8ರಂದು ಬೆಳಿಗ್ಗೆ ದೇವಿ ಸುಪ್ರಭಾತ, ಪೂಜೆ, ಮಧ್ಯಾಹ್ನ ಅಪಾರ ಭಕ್ತರ ಸಮೂಹದಲ್ಲಿ ಕೆಂಪಮ್ಮ ದೇವಿಯ ರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ.

ಭಾನುವಾರ ರಾತ್ರಿ 9.30ಕ್ಕೆ ‘ಕುರುಕ್ಷೇತ್ರ’ ನಾಟಕ ಪ್ರದರ್ಶನವಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಕೆಂಪಮ್ಮ ದೇವಿ ಸೇವಾ ಸಮಿತಿಯ ಪ್ರಕಟಣೆ
ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT