ಯುವ ಸಮೂಹಕ್ಕೆ ಇತಿಹಾಸದ ಅರಿವಿರಲಿ

7

ಯುವ ಸಮೂಹಕ್ಕೆ ಇತಿಹಾಸದ ಅರಿವಿರಲಿ

Published:
Updated:
Prajavani

ತುಮಕೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಅವರ ಸಾಹಿತ್ಯ, ಪುಸ್ತಕಗಳನ್ನು ಓದುವ ಮೂಲಕ ಈ ನೆಲದ ಮುಚ್ಚಿಟ್ಟ ಇತಿಹಾಸವನ್ನು ಯುವ ಸಮೂಹ ಅರಿತುಕೊಳ್ಳಬೇಕು ಎಂದು ಉಪನ್ಯಾಸಕ ಗುಣಶೀಲ ತಿಳಿಸಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ಅಂಬೇಡ್ಕರ್‌ ಕೋಚಿಂಗ್‌ ಸೆಂಟರ್‌ ಆಯೋಜಿಸಿದ್ದ ಸಾವಿತ್ರಿ ಬಾಯಿಫುಲೆ ಅವರ ಜನ್ಮದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ 40 ವರ್ಷಗಳ ಇತಿಹಾಸಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ. ಅದಕ್ಕಿಂತಲೂ ಹಿಂದೆ ಅಡಗಿರುವ ಇತಿಹಾಸವನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಯಾರೂ ಮಾಡುತ್ತಿಲ್ಲ. ಅಂಬೇಡ್ಕರ್ ಅವರಿಂದ ದೇಶದ ಮೊದಲ ಶಿಕ್ಷಕಿ ಸಾವಿತ್ರಿ ಬಾಯಿಫುಲೆ ಅವರ ಬಗ್ಗೆ ನಾವೆಲ್ಲ ಇಂದು ತಿಳಿದುಕೊಳ್ಳುವಂತಾಗಿದೆ ಎಂದರು.

ಅಂಬೇಡ್ಕರ್ ಕೋಚಿಂಗ್ ಸೆಂಟರ್‌ನ ನಾಗರಾಜ್ ಅವರು ಮಾತನಾಡಿ, ‘ಮನು ವರ್ಣ ವ್ಯವಸ್ಥೆಗೆ ಅಂಟಿಕೊಂಡು ಶಿಕ್ಷಣದಿಂದ ವಂಚಿತರಾದವರಿಗೆ ಶಿಕ್ಷಣ ಕಲಿಸುವ ಮೂಲಕ ಸಾವಿತ್ರಿಬಾಯಿಫುಲೆ ಶಿಕ್ಷಿತ ಸಮುದಾಯವನ್ನು ಹುಟ್ಟುಹಾಕಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ಉಪನ್ಯಾಸಕರಾದ ಲಕ್ಷ್ಮೀಕಾಂತ್, ಮಂಜುನಾಥ್, ರಾಜಣ್ಣ ಹಾಗೂ ಶಿಬಿರಾರ್ಥಿಗಳು ಕಾರ್ಯಕ್ರಮದದಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !