ಜ್ಞಾನವಿದ್ದಲ್ಲಿ ಜ್ಞಾನ ದೊರೆಯಲು ಸಾಧ್ಯ

7
ಜ್ಞಾನಬುತ್ತಿ ಸತ್ಸಂಗದ 500 ನೇ ಸಾಪ್ತಾಹಿಕ ಕಾರ್ಯಕ್ರಮದಲ್ಲಿ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಅಭಿಮತ

ಜ್ಞಾನವಿದ್ದಲ್ಲಿ ಜ್ಞಾನ ದೊರೆಯಲು ಸಾಧ್ಯ

Published:
Updated:
Prajavani

ತುಮಕೂರು: ಜ್ಞಾನವಿರುವ ಕಡೆ ಜ್ಞಾನಕ್ಕಾಗಿಯೇ ಹೋದಲ್ಲಿ ಮಾತ್ರ ಎಲ್ಲರಿಗೂ ಜ್ಞಾನ ದೊರೆಯಲು ಸಾಧ್ಯ ಎಂದು ಹಿರೇಮಠ ಅಧ್ಯಕ್ಷ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ನುಡಿದರು.

ನಗರದ ಸೋಮೇಶ್ವರಪುರಂನ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ಜ್ಞಾನಬುತ್ತಿ ಸತ್ಸಂಗದ 500 ನೇ ಸಾಪ್ತಾಹಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಮ್ಮ ಮಕ್ಕಳಿಗೆ ಕೈತುತ್ತು ಕೊಡುತ್ತಾರೆ. ಅದೇ ಅಮ್ಮ ಮಕ್ಕಳು ಹಸಿದುಕೊಂಡಿರಬಾರದು ಎಂದು ಬುತ್ತಿ ಕೊಡುತ್ತಾಳೆ ಎಂದು ನುಡಿದರು.

ಜ್ಞಾನಬುತ್ತಿ ಸತ್ಸಂಗದ ಬಗ್ಗೆ ತುಂಬಾ ಗೌರವ ಇದೆ. ಈ ಸಂಘದ ಪಿ.ಶಾಂತಿಲಾಲ್ ಮತ್ತು ಟಿ.ಮುರಳೀಕೃಷ್ಣಪ್ಪ ಇಬ್ಬರು ಎರಡು ಕಣ್ಣುಗಳಿದ್ದಂತೆ. ಈ ಎರಡು ಕಣ್ಣುಗಳು ಅತ್ಯಂತ ಶ್ರೇಷ್ಠ ಎಂದರು.

ಕೌಶಲ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ, ‘ಇಂದಿನ ಯುವಕರಿಗೆ ಸ್ವಾಮಿ ವಿವೇಕಾನಂದರ ನುಡಿಮುತ್ತುಗಳು ದಾರಿದೀಪವಾಗಿವೆ.  ಹಾಗೇ ಜ್ಞಾನಬುತ್ತಿ ಸತ್ಸಂಗದಿಂದ ಉತ್ತಮ ದಾರಿಯನ್ನು ಕಂಡುಕೊಳ್ಳಬಹುದು’ ಎಂದು ಆಶಯವ್ಯಕ್ತಪಡಿಸಿದರು.

ಜ್ಞಾನಬುತ್ತಿ ಸತ್ಸಂಗಕ್ಕೆ ಒಂದು ನಿವೇಶನದ ಅಗತ್ಯವಿದೆ. ಅದನ್ನು ಸರ್ಕಾರದ ವತಿಯಿಂದ ಕೊಡಿಸುವ ಪ್ರಯತ್ನ ಮಾಡುತ್ತೇನೆಂದು ಭರವಸೆ ನೀಡಿದರು.

ಬೆಂಗಳೂರಿನ ಶ್ರೀನಿವಾಸ ಅಯ್ಯಂಗಾರ್, ಕೃಷ್ಣಸ್ವಾಮಿ, ಗುರುದತ್ ಪ್ರಕಾಶ್ ಬಾಬು ಅವರು ಜ್ಞಾನಬುತ್ತಿಯ ಸಂಸ್ಥಾಪಕ ಪಿ.ಶಾಂತಿಲಾಲ್ ಮತ್ತು ಪತ್ನಿ ಮೋಹಿನಿಬಾಯಿ ಅವರನ್ನು ಸನ್ಮಾನಿಸಿದರು.

ವಿದ್ಯಾವಾಹಿನಿ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಕೆ.ಬಿ.ಜಯಣ್ಣ, ಜ್ಞಾನಬುತ್ತಿಯ ಎಂ.ಸಿ.ಲಲಿತಾ, ಟಿ.ಮುರಳೀಕೃಷ್ಣಪ್ಪ, ಆರ್.ಎಲ್.ರಮೇಶ್‌ಬಾಬು ಮತ್ತು ಬಿ.ಆರ್.ನಾಗರಾಜಶೆಟ್ಟಿ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !