ಕೊಡಿಗೇನಹಳ್ಳಿ: ಹೋಬಳಿಯ ಮುದ್ದೇನಹಳ್ಳಿ ಬಳಿ ₹18.5 ಕೋಟಿ ವೆಚ್ಚದ ಚೆಕ್ ಡ್ಯಾಂ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದೂ, ಕೆಲವೇ ದಿನಗಳಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ.

ತಾಲ್ಲೂಕಿನ ಗಡಿಭಾಗದಲ್ಲಿರುವ ಮುದ್ದೇನಹಳ್ಳಿ-ಶಾನಗಾನಹಳ್ಳಿ ಬಳಿ ಹಾದು ಹೋಗುವ ಜಯಮಂಗಲಿ ನದಿಗೆ ಸರಿಯಾದ ಸೇತುವೆಯಿಲ್ಲದೆ ಐಡಿಹಳ್ಳಿ ಹಾಗೂ ಮಿಡಿಗೇಶಿ ಹೋಬಳಿಯ ಹಲವು ಗ್ರಾಮಗಳ ಜನರು ಆಂಧ್ರಕ್ಕೆ ತೆರಳಲು ಹಾಗೂ ಹಿಂದೂಪುರ ಭಾಗದಿಂದ ಸ್ವಗ್ರಾಮಗಳಿಗೆ ತೆರಳಲು ತೊಂದರೆಯಾಗುತ್ತಿತ್ತು.

ಆರು ತಿಂಗಳ ಹಿಂದೆ ಈ ಚೆಕ್ ಡ್ಯಾಂ ಕಾಮಗಾರಿಗೆ ಸಣ್ಣ ನೀರಾವರಿ ಸಚಿವ ಬೋಸುರಾಜು ಚಾಲನೆ ನೀಡಿದ್ದರು.

ಸದ್ಯ ಚೆಕ್ ಡ್ಯಾಂನಲ್ಲಿ ನೀರು ನಿಲ್ಲಲು ಹೂಳು ತೆಗೆಯುವ ಕೆಲಸ ನಡೆಯುತ್ತಿದ್ದು, ರಸ್ತೆ ಅಂಚಿನಲ್ಲಿ ಡಾಂಬರ್ ಮತ್ತು ರೈಲಿಂಗ್ಗೆ ಹಳದಿ ಮತ್ತು ಬಿಳಿ ಬಣ್ಣ ಬಳಿಯುವುದಷ್ಟೇ ಬಾಕಿಯಿದೆ. ಇನ್ನು ಕೆಲ ದಿನಗಳಲ್ಲಿ ಕಾಮಗಾರಿ ಪೂರ್ಣಗೊಂಡು ಜನರ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಗುತ್ತಿಗೆದಾರ ಹುಬ್ಬಳಿಯ ಅಶೋಕ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

‘ಸೇತುವೆ ನೋಡಿದಾಕ್ಷಣ ಖಷಿಯಾಗುತ್ತದೆ. ಈ ಭಾಗದಲ್ಲಿ ಇಂತಹ ಬೃಹದಾಕಾರದ ಸೇತುವೆ ನಿರ್ಮಾಣವಾಗುತ್ತದೆ ಎಂದು ಊಹಿಸಿರಲಿಲ್ಲ. ಜನಪ್ರತಿನಿಧಿಗಳು ಇಂತಹ ಶಾಶ್ವತ ಕೆಲಸಗಳನ್ನು ಮಾಡಿದಾಗ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತಾರೆ’ ಎಂದು ಮುದ್ದೇನಹಳ್ಳಿ ಎಂ.ಶಿವಯ್ಯ ಸಂತಸ ವ್ಯಕ್ತಪಡಿಸಿದರು.

‘ಮಳೆಗಾಲದಲ್ಲಿ ನದಿ ದಾಟಲು ಐಡಿಹಳ್ಳಿ, ಕೊಡಿಗೇನಹಳ್ಳಿ ಹಾಗೂ ಮಿಡಿಗೇಶಿಯ 50ಕ್ಕಿಂತ ಹೆಚ್ಚು ಗ್ರಾಮಗಳ ಜನರಿಗೆ ತೊಂದರೆಯಾಗುತ್ತಿತ್ತು. ಆಂಧ್ರದಿಂದ ಹೋಬಳಿಗೆ ವ್ಯಾಪಾರಕ್ಕೆ ಬರುವವರು ಹಾಗೂ ಸಂಬಂಧಿಕರ ಮನೆಗೆ ಬರುವವರು ಪರದಾಡುವಂತಾಗಿತ್ತು. ಸೇತುವೆ ನಿರ್ಮಾಣದಿಂದ ಸಹಾಯವಾಗಿದೆ’ ಎನ್ನುತ್ತಾರೆ ವಿಠಲಾಪುರದ ಪ್ರಜ್ವಲ್ ಶಂಕರ್.

ಚೆಕ್ ಡ್ಯಾಂನಲ್ಲಿ ನೀರು ನಿಲ್ಲುವುದರಿಂದ ಈ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗಿ ಕೃಷಿ, ನೀರಾವರಿಗೆ ಸಹಕಾರಿಯಾಗಲಿದೆ ಎನ್ನುವುದು ಮುದ್ದೇನಹಳ್ಳಿಯ ಸಾಯಿಪ್ರಕಾಶ್ ಅವರ ಅಭಿಪ್ರಾಯ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-17-1678972886

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.