ಕೊಡಿಗೇನಹಳ್ಳಿ: ಹೋಬಳಿಯಾದ್ಯಂತ ಬಿಸಿಲಿನ ತಾಪಮಾನ ಸುಮಾರು 38 ಡಿಗ್ರಿಯಷ್ಟು ಇದೆ. ಜನ ಮರದ ನೆರಳು, ಫ್ಯಾನ್ ಹಾಗೂ ತಂಪು ಪಾನೀಯಗಳ ಮೊರೆ ಹೋಗಿದ್ದರೆ, ಶಾಲಾ-ಕಾಲೇಜು ರಜೆ ಇರುವುದರಿಂದ ಹುಡುಗರು ನೀರಿನ ತೊಟ್ಟಿ ಹಾಗೂ ಕೃಷಿ ಹೊಂಡಗಳಲ್ಲಿ ಈಜಾಡಿ ದಣಿವಾರಿಸಿಕೊಳ್ಳುತ್ತಿದ್ದಾರೆ.

ಕೊಡಿಗೇನಹಳ್ಳಿ ಹಾಗೂ ಐಡಿಹಳ್ಳಿ ಹೋಬಳಿಗಳು ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿದೆ. ಇಲ್ಲಿ ತಾಪಮಾನ ಹೆಚ್ಚಿದೆ. ಪ್ರತಿವರ್ಷ ಯುಗಾದಿ ಹಬ್ಬದ ಹಿಂದು-ಮುಂದೆ ಮಳೆ ಬೀಳುತ್ತಿತ್ತು. ಮರ-ಗಿಡಗಳಲ್ಲಿ ಎಲೆ ಉದುರಿ ಚಿಗುರೊಡೆಯುತ್ತಿದ್ದರಿಂದ ಸೆಖೆ ಇದ್ದರೂ ಕೂಡ ಸ್ವಲ್ಪ ಗಾಳಿ ಬರುತ್ತಿದ್ದರಿಂದ ಜನರು ತೊಂದರೆ ಆಗುತ್ತಿರಲಿಲ್ಲ.

ಕೆಲಸದ ಒತ್ತಡ ಮತ್ತು ಹೊರಗಡೆ ಹೋಗಬೇಕಾದ ಸಂದರ್ಭದಲ್ಲಿ ತಂಪು ಪಾನೀಯ, ಮಜ್ಜಿಗೆ, ಎಳನೀರಿಗೆ ಮುಗಿಬೀಳುವಂತಾಗಿದೆ. ನಾವು ಪ್ರಕೃತಿಯನ್ನು ದೂಷಿಸುವ ಬದಲು ಮರಳು, ನದಿ, ಕೆರೆ-ಕುಂಟೆ ಒತ್ತುವರಿ ಜತೆಗೆ ಮರಗಿಡಗಳ ನಾಶ ಮಾಡುತ್ತಿರುವುದರ ಬಗ್ಗೆ ಮೊದಲು ಪ್ರಶ್ನೆ ಮಾಡಿಕೊಳ್ಳಬೇಕಾಗಿದೆ ಎನ್ನುತ್ತಾರೆ ರೆಡ್ಡಿಹಳ್ಳಿ ರಸ್ತೆಯಲ್ಲಿನ ಜೂಲಪ್ಪ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-18-990220975

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.