ಕೊಡಿಗೇನಹಳ್ಳಿ: ಬೇಸಿಗೆ ರಜೆ ಮುಗಿದು ಶಾಲಾ ಆರಂಭೋತ್ಸವಕ್ಕೆ ಇನ್ನು ಎರಡು ದಿನ ಬಾಕಿ ಇರುವಾಗ ಮಂಗಳವಾರ ರಾತ್ರಿ ಸುರಿದ ಮಳೆಗೆ ಉರ್ದು ಶಾಲಾ ಕಟ್ಟಡ ಜಲಾವೃತವಾಗಿದೆ.

ಹಿಂದೆ ಪಟ್ಟಣದಲ್ಲಿದ್ದ ರಾಜಕಾಲುವೆ ಒತ್ತುವರಿಯಾಗಿರುವ ಕಾರಣ ಈಗ ಜೋರಾಗಿ ಮಳೆ ಬಂದರೆ ಸಾಕು ನೀರು ಸರಾಗವಾಗಿ ಹರಿಯಲು ಚರಂಡಿ ವ್ಯವಸ್ಥೆ ಇಲ್ಲದೆ ತಗ್ಗು ಪ್ರದೇಶಗಳಿಗೆ ನುಗ್ಗುತ್ತದೆ. ಪ್ರಮುಖ ರಸ್ತೆ ಪಕ್ಕದಲ್ಲಿರುವ ಪೊಲೀಸ್ ಠಾಣೆ, ಪಶು ಆಸ್ಪತ್ರೆ, ಕೆಇಬಿ ಕಚೇರಿ ಮುಂಭಾಗ ಮಳೆ ನೀರು ನಿಲ್ಲುತ್ತಿದೆ. ಇದಕ್ಕೆ ರಾಜಕಾಲುವೆಗಳು ಮುಚ್ಚಿರುವುದೇ ಮುಖ್ಯ ಕಾರಣ ಎನ್ನುತ್ತಾರೆ ಸ್ಥಳೀಯರು.

ಈ ಬಗ್ಗೆ ಕೆಲವು ಪ್ರಜ್ಞಾವಂತ ನಾಗರಿಕರು ಗ್ರಾಮ ಪಂಚಾಯಿತಿ ಮತ್ತು ಸಂಬಂಧಪಟ್ಟ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೆಲವು ಸ್ಥಳೀಯ ಜನಪ್ರತಿನಿಧಿಗಳು ಮತ್ತು ಗ್ರಾಮ ಪಂಚಾಯಿತಿ ಅಧಿಕಾರಿಗಳು ಇಂತಹ ಚಿತ್ರಣವನ್ನು ಕಣ್ಣಾರೆ ನೋಡಿದರೂ ನೋಡದಂತೆ ಮೌನ ವಹಿಸಿದ್ದಾರೆ ಎಂದು ಕೆಲ ಪ್ರಜ್ಞಾವಂತರು ದೂರಿದ್ದಾರೆ.

ಗ್ರಾಮ ಪಂಚಾಯಿತಿ ತಕ್ಷಣ ಶಾಲಾ ಆವರಣದಲ್ಲಿ ಮಳೆ ನೀರು ನಿಲ್ಲದಂತೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಸರ್ವೋದಯ ಪ್ರೌಢಶಾಲೆ ನಿವೃತ್ತ ಶಿಕ್ಷಕ ನಬೀಸಾಬ್ ತಿಳಿಸಿದರು.

ಮಂಗಳವಾರ ಸುರಿದ ಮುಂಗಾರು ಪೂರ್ವ ಮಳೆಗೆ ಶಾಲಾ ಆವರಣಕ್ಕೆ ನೀರು ನುಗ್ಗಿರುವ ವಿಚಾರ ತಿಳಿದು ಸ್ಥಳ ಪರಿಶೀಲಿಸಿದ್ದೇನೆ. ತಕ್ಷಣ ಚರಂಡಿಗಳನ್ನು ಸ್ವಚ್ಛಗೊಳಿಸಿ ಶಾಲಾ ಆವರಣಕ್ಕೆ ನೀರು ಹೋಗದಂತೆ ಕ್ರಮ ತೆಗೆದುಕೊಳ್ಳುವುದಾಗಿ ಪಿಡಿಒ ಮಹೇಶ್ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-17-1400020698

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.