ಕೊಡಿಗೇನಹಳ್ಳಿ: ಹೋಬಳಿಯ ವೆಂಗಳಮ್ಮನಹಳ್ಳಿಯಲ್ಲಿ ಗುರುವಾರ ರಾತ್ರಿ ಬೀಸಿದ ಗಾಳಿ ಮತ್ತು ಮಳೆಗೆ ಐದು ವಿದ್ಯುತ್ ಕಂಬ ಹಾಗೂ ಒಂದು ಬೇವಿನ ಮರ ನೆಲಕ್ಕುರುಳಿವೆ.

ಈ ಭಾಗದಲ್ಲಿ ಇದುವರೆಗೂ ಮಳೆ ಬೀಳದೆ ಬಿಸಿಲಿನ ತಾಪಕ್ಕೆ ಜನ ಹೈರಾಣಾಗಿದ್ದರು. ಕೊಳವೆ ಬಾವಿಗಳು ಬತ್ತಿದ್ದವು. ಪೂರ್ವ ಮುಂಗಾರಿನಲ್ಲಿ ಇದೇ ಮೊದಲ ಬಾರಿಗೆ ಕೊಡಿಗೇನಹಳ್ಳಿ ಭಾಗದಲ್ಲಿ ಗುರುವಾರ ರಾತ್ರಿ ಹದ ಮಳೆಯಾಗಿದೆ ಎನ್ನುತ್ತಾರೆ ಕಸಿನಾಯಕಹಳ್ಳಿ ಗ್ರಾಮದ ಸುನೀಲ್.

ಕೃಷಿ ಚಟುವಟಿಕೆಗೆ ಅನುಕೂಲ: ಏಪ್ರಿಲ್-ಮೇ ವೇಳೆಗೆ ಪೂರ್ವ ಮುಂಗಾರು ಬೀಳುತ್ತಿದ್ದರಿಂದ ಈ ಭಾಗದಲ್ಲಿನ ಬಹುತೇಕ ಕೃಷಿ ಭೂಮಿಯನ್ನು ಎರಡೆರೆಡು ಬಾರಿ ಹುಕ್ಕೆ ಮಾಡಿಸುತ್ತಿದ್ದರು. ಆದರೆ ಈ ಬಾರಿ ಇದುವರೆಗೂ ಮಳೆಯಿಲ್ಲದೆ ಗುರುವಾರ ರಾತ್ರಿ ಹದ ಮಳೆಯಾಗಿರುವುದರಿಂದ ಇನ್ನು ಕೃಷಿ ಚಟುವಟಿಕೆ ಆರಂಭಿಸಿ ಜಮೀನನ್ನು ಹದ ಮಾಡಿಕೊಳ್ಳಲು ಕೃಷಿ ಆರಂಭಿಸಬೇಕಿದೆ ಎನ್ನುತ್ತಾರೆ ಇಲ್ಲಿನ ರೈತರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-17-2001671663

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.