ಕೊಡಿಗೇನಹಳ್ಳಿ: ಪಟ್ಟಣದಲ್ಲಿನ 5ನೇ ಬ್ಲಾಕ್ನಲ್ಲಿ ಹಾದು ಹೋಗುವ ರಾಜಕಾಲುವೆ ಹಾಗೂ ಇತರೆ ಚರಂಡಿಗಳಲ್ಲಿನ ಕೊಳೆತ ತ್ಯಾಜ್ಯ ದುರ್ನಾತ ಬೀರುತ್ತಿರುವುದರಿಂದ ಅಲ್ಲಿನ ಜನರು ದುರ್ವಾಸನೆ ಜೊತೆಗೆ ಸೊಳ್ಳೆಗಳ ಕಾಟಕ್ಕೆ ನಲುಗುವಂತಾಗಿದೆ.

ಪಟ್ಟಣದ 5ನೇ ಬ್ಲಾಕ್ನಲ್ಲಿ ರಾಜಕಾಲುವೆ, ಬಾಬು ಜಗಜೀವನರಾಂ ಭವನ ಮುಂಭಾಗ, ದಂಡಿ ಮಾರಮ್ಮ ದೇವಸ್ಥಾನ ಹಿಂಭಾಗ ಹಾಗೂ ಅನೇಕರ ಮನೆ ಸುತ್ತಮುತ್ತ ಚರಂಡಿಗಳು ಒಂದು ವರ್ಷದಿಂದ ಅಚ್ಚುಕಟ್ಟು ಮಾಡದಿರುವ ಕಾರಣ ತ್ಯಾಜ್ಯ ನಿಂತಲ್ಲೇ ನಿಂತಿದೆ. ಸೊಳ್ಳೆಗಳ ಉತ್ಪತ್ತಿಗೆ ಕಾರಣವಾಗಿದೆ.

ಇಲ್ಲಿನ ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ಸಂಬಂಧಿಸಿದವರಿಗೆ ಹಲವು ಬಾರಿ ಮನವಿ ಮಾಡಿದರೂ ಗಮನಹರಿಸುತ್ತಿಲ್ಲ. ಹೊರಗಡೆ ಓಡಾಡಿದರೆ ದುರ್ನಾತ ಬರಲಿದೆ. ರಾತ್ರಿ ಸಮಯದಲ್ಲಿ ಮನೆಯಲ್ಲಿ ಮಲಗಲು ಸೊಳ್ಳೆಗಳ ಕಾಟಕ್ಕೆ ಬೇಸತ್ತಿದ್ದೇವೆ. ಇದರಿಂದ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಅಧಿಕಾರಿಗಳು ಗಮನಿಸಿ ಕ್ರಮಕೈಗೊಳ್ಳಬೇಕು ಎಂದು 5ನೇ ಬ್ಲಾಕ್ ಜನರು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-17-205130741

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.