ಕೊಡಿಗೇನಹಳ್ಳಿ: ಪೂರ್ವ ಮುಂಗಾರಿನಲ್ಲಿ ಇದುವರೆಗೂ ಹದ ಮಳೆ ಬೀಳದಿರುವುದು ಮುಂದೆ ಕೃಷಿ ಚಟುವಟಿಕೆ ಹಾಗೂ ಕುಡಿಯುವ ನೀರಿಗಾಗಿ ಸಮಸ್ಯೆ ಎದುರಾಗಬಹುದು ಎಂಬ ಆತಂಕ ಜನರಲ್ಲಿ ಕಾಡುವಂತಾಗಿದೆ.

ಬಯಲುಸೀಮೆಯಲ್ಲಿನ ಮಧುಗಿರಿ ತಾಲ್ಲೂಕು ಮಳೆಯಾಶ್ರಿತ ಪ್ರದೇಶ. ಇಲ್ಲಿ ಮುಂಗಾರಿನಲ್ಲಿ ಉತ್ತಮ ಮಳೆಯಾದರೆ ಮತ್ತು ಯಾವುದೇ ರೋಗ-ರುಜಿನ ಇಲ್ಲವಾದರೆ ಮಾತ್ರ ರೈತರಿಗೆ ಕೈತುಂಬಾ ಬೆಳೆ. ಇಲ್ಲವಾದರೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಒಮ್ಮೊಮ್ಮೆ ಬೆಳೆ ನಷ್ಟದ ಜೊತೆಗೆ ಜಾನುವಾರುಗಳಿಗೆ ಮೇವು ದೊರಕುವುದು ಕೂಡ ಕಷ್ಟ. ಇಂತಹ ಸಂದರ್ಭದಲ್ಲಿ ಒಂದೆಡೆ ಬಿಸಿಲಿನ ತಾಪಮಾನ ಜನರನ್ನು ಕೆಂಗೆಡಿಸಿದ್ದರೆ ಮತ್ತೊಂದೆಡೆ ಇದುವರೆಗೂ ಮಳೆ ಬೀಳದಿರುವುದು ರೈತರನ್ನು ಆತಂಕಕ್ಕೆ ಈಡು ಮಾಡಿದೆ.

ಎರಡು ವರ್ಷಗಳ ಹಿಂದೆ ತಾಲ್ಲೂಕಿನಲ್ಲಿ ಸುರಿದಿದ್ದ ಉತ್ತಮ ಮಳೆಗೆ ಹಲವು ಕೆರೆಗಳು ತುಂಬಿ ಅಂತರ್ಜಲ ಹೆಚ್ಚುವುದರ ಜೊತೆಗೆ ಕೊಳವೆ ಬಾವಿಗಳಲ್ಲಿ ಕೂಡ ನೀರು ಬರಲಾರಂಭಿಸಿತ್ತು. ಇದರಿಂದ ನೀರಿನ ಸೌಕರ್ಯ ಹೊಂದಿದ್ದ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದರು. ಕೆಲ ರೈತರು ಈ ಭಾಗ ಬಯಲುಪ್ರದೇಶವೆಂದು ತಿಳಿದಿದ್ದರೂ ಅಡಿಕೆ ಸಸಿ ನೆಟ್ಟಿದ್ದರು. ಆದರೆ ಹಿಂದಿನ ವರ್ಷ ಸರಿಯಾಗಿ ಮಳೆ ಬಾರದಿರುವುದು ಮತ್ತು ಈ ಬಾರಿಯ ಬಿಸಿಲು ರೈತರನ್ನು ಮೇಲೆ ಕೆಳಗೆ ನೋಡುವಂತೆ ಮಾಡಿದೆ.

ಮಳೆ ಅಭಾವ ಮತ್ತು ಬಿಸಿಲಿನ ತಾಪಕ್ಕೆ ನದಿ ಮೂಲ ಮತ್ತು ಕಾಲುವೆ ಜೊತೆಗೆ ಬೆಟ್ಟದ ಸಾಲಿನಿಂದ ತುಂಬಿರುತ್ತಿದ್ದ ಕೆಲ ಕೆರೆಗಳು ಇಂದು ಹಂತ ಹಂತವಾಗಿ ಖಾಲಿಯಾಗತೊಡಗಿವೆ. ದಿನದಿಂದ ದಿನಕ್ಕೆ ಅಂತರ್ಜಲ ಮಟ್ಟ ಕುಸಿಯತೊಡಗಿದೆ. ಈ ವರ್ಷವು ಕೂಡ ಮಳೆ ಪ್ರಮಾಣ ಕಡಿಮೆ ಎಂದು ಹವಮಾನ ತಜ್ಞರು ಸೂಚಿಸಿರುವುದರಿಂದ ಮುಂದೆ ಎದುರಾಗಬಹುದಾದ ನೀರಿನ ಸಮಸ್ಯೆ ಬಗ್ಗೆ ದಿಗಿಲು ಬೀಳುವಂತಾಗಿದೆ ಎನ್ನುತ್ತಾರೆ ರೈತ ತೆರಿಯೂರು ರಾಮೇಗೌಡ.

ಬಯಲು ಸೀಮೆಗೆ ಶೀಘ್ರ ಶಾಶ್ವತ ನೀರಾವರಿ ಅವಶ್ಯಕ: ಇಲ್ಲಿನ ರೈತರು ಕೃಷಿಯಿಂದ ನಷ್ಟ ಅನುಭವಿಸಿ ಹಲವಾರು ಕುಟುಂಬಗಳು ಪಟ್ಟಣಗಳತ್ತ ಮುಖಮಾಡುತ್ತಿವೆ. ಮುಂದೆ ಜನರು ಗ್ರಾಮಗಳನ್ನು ಖಾಲಿ ಮಾಡಿ ಅವು ವೃದ್ಧಾಶ್ರಮಗಳಾಗುವ ಮುಂಚೆ ಬಯಲುಸೀಮೆಗೆ ಶಾಶ್ವತ ನೀರಾವರಿ ಎತ್ತಿನಹೊಳೆ, ಹೇಮಾವತಿ ಅಥವಾ ಭದ್ರಾ ಯೋಜನೆಯಿಂದ ನೀರು ಹರಿಸುವುದರ ಜತೆಗೆ ಅಲ್ಲಲ್ಲಿ ಕೈಗಾರಿಕೆ ಆರಂಭಿಸಿದರೆ ಬಯಲುಸೀಮೆ ಜನರು ಉಳಿಯಲು ಸಾಧ್ಯ ಎನ್ನುತ್ತಾರೆ ರೈತ ಮುಖಂಡ ಮುತ್ತರಾಯನಹಳ್ಳಿ ಚಿಕ್ಕಣ್ಣ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-17-2018139518

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.