ವಿಷಪೂರಿತ ನೀರು ಕುಡಿದು ಮೂರು ಮೇಕೆ ಸಾವು

ಭಾನುವಾರ, ಮೇ 26, 2019
33 °C

ವಿಷಪೂರಿತ ನೀರು ಕುಡಿದು ಮೂರು ಮೇಕೆ ಸಾವು

Published:
Updated:
Prajavani

ಕೋರ: ಹೋಬಳಿ ಸಮೀಪವಿರುವ ರಾಮಗೊಂಡನಹಳ್ಳಿ ಬಳಿ ವಿಷಪೂರಿತ ನೀರು ಕುಡಿದು ಮೂರು ಮೇಕೆಗಳು ಭಾನುವಾರ ಸಾವನ್ನಪ್ಪಿವೆ.

ರಾಮಗೊಂಡನಹಳ್ಳಿಯ ಹುಲಿಯಪ್ಪ ಎಂಬುವವರು ಮೇಕೆಗಳನ್ನು ಮೇಯಿಸಲು ತೆರಳಿದ್ದರು. ಆ ವೇಳೆ ಹಿರೇಗುಂಡಗಲ್ ಬಳಿ ಇರುವ ತೋಟದಲ್ಲಿ ನೀರು ಕುಡಿದ 6 ಮೇಕೆಗಳ ಪೈಕಿ ಮೂರು ಸ್ಥಳದಲ್ಲೇ ಮೃತಪಟ್ಟಿವೆ. ಮೂರು ಮೇಕೆಗಳಿಗೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿವೆ.

ಸ್ಥತಳಕ್ಕೆ ರಾಮಗೊಂಡನಹಳ್ಳಿ ಪಶುವೈದ್ಯಾಧಿಕಾರಿ ಶ್ರೀಧರ್ ಭೇಟಿ ನೀಡಿ ಪರಿಶೀಲಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !