ಕೊರಟಗೆರೆ: ತಾಲ್ಲೂಕಿನ ಬುಕ್ಕಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬರಕ ಗ್ರಾಮದಲ್ಲಿ ತಲೆಮಾರುಗಳಿಂದ ಆಚರಿಸಿಕೊಂಡು ಬರುತ್ತಿರುವ ‘ಬೆಳದಿಂಗಳು’ ಅಥವಾ ‘ತಿಂಗಳ ಮಾವನ ಪೂಜೆ’ ಸಾಂಪ್ರದಾಯಿಕವಾಗಿ ನೆರವೇರಿತು.

ಒಂಬತ್ತು ದಿನ ನಡೆಯುವ ಈ ಆಚರಣೆಯಲ್ಲಿ ಮೊದಲ ಎಂಟು ದಿನ ಪ್ರತಿದಿನ ಸಂಜೆ 6 ಗಂಟೆಯಿಂದ ರಾತ್ರಿ 12ರವರೆಗೆ ಗ್ರಾಮಸ್ಥರು ಒಂದೇ ಸ್ಥಳದಲ್ಲಿ ಸೇರಿ ಬೆಳದಿಂಗಳು ಬರೆಯುವುದು, ಚಂದ್ರನ ಕುರಿತಾದ ಜನಪದ ಹಾಡುಗಳನ್ನು ಹಾಡುವುದು ಮುಂತಾದ ಚಟುವಟಿಕೆ ನಡೆಸಿದರು. ಒಂಬತ್ತನೇ ದಿನ ಮುಖ್ಯ ಪೂಜೆ ನೆರವೇರಿಸಲಾಯಿತು.

ಪೂಜೆ ನಡೆಯುವ ನೆಲವನ್ನು ಸಗಣಿಯಿಂದ ಲೇಪಿಸಿ ಹಸಿರಾಗಿಸಿ, ಅದರ ಮೇಲೆ ರಾಗಿಹಿಟ್ಟಿನಿಂದ ರಂಗೋಲಿಗಳನ್ನು ಬಿಡಿಸಲಾಗಿತ್ತು.

ಈ ಆಚರಣೆಯ ಪ್ರಮುಖ ಆಕರ್ಷಣೆಯಾಗಿ ಇಬ್ಬರು ಬಾಲಕರನ್ನು ಮದುವಣಿಗರಾಗಿ ಸಜ್ಜುಗೊಳಿಸಲಾಗಿತ್ತು. ಮದುಮಗನಾಗಿ ಒಬ್ಬ ಬಾಲಕ, ಮದುಮಗಳಾಗಿ ಮತ್ತೊಬ್ಬ ಬಾಲಕನಿಗೆ ಸೀರೆ ಉಡಿಸಿ ಆಭರಣಗಳಿಂದ ಅಲಂಕರಿಸಿ, ಊರ ದೇವಾಲಯದಿಂದ ನಾದಸ್ವರ, ತಮಟೆ, ಡೋಲಿನ ಸದ್ದಿನೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಗುತ್ತದೆ. ಗ್ರಾಮಸ್ಥರು, ಮಹಿಳೆಯರು, ಪುರುಷರು, ಸಂಬಂಧಿಕರು ಎಲ್ಲರೂ ಈ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ.

ಚಂದ್ರನನ್ನು ಹೊಯ್ದ ಸ್ಥಳಕ್ಕೆ ಮದುವಣಿಗರನ್ನು ಕೂರಿಸಿ, ಹೂಮಾಲೆ ಬದಲಾಯಿಸಿ, ಸಾಂಕೇತಿಕವಾಗಿ ತಾಳಿ ಕಟ್ಟಿಸಲಾಗುತ್ತದೆ. ಮದುಮಗನನ್ನು ‘ಸೂರ್ಯ’ ಎಂದು, ಮದುಮಗಳನ್ನು ‘ಚಂದ್ರಮ್ಮ’ ಎಂದು ಕರೆದು, ಈ ವಿಶೇಷ ಲಗ್ನ ನೆರವೇರಿಸಲಾಗುತ್ತದೆ. ಈ ಸಮಯದಲ್ಲಿ ಚಂದ್ರನ ಕುರಿತಾದ ಹಾಡುಗಳು ನಿರಂತರವಾಗಿ ಮೊಳಗುತ್ತಲೇ ಇರುತ್ತವೆ.

ಮಧ್ಯರಾತ್ರಿ ಚಂದ್ರ ಪ್ರತಿಬಿಂಬ ಕನ್ನಡಿಯಲ್ಲಿ ಕಾಣಿಸಿಕೊಂಡಾಗ ಪೂಜೆ ನೆರವೇರಿಸಲಾಗುತ್ತದೆ. ಆಚರಣೆಯ ಭಾಗವಾಗಿ ‘ಕಳ್ಳ ಕಳಸ’ ತೆಗೆದುಕೊಂಡು ಹೋಗುವ ಸಂಪ್ರದಾಯವೂ ನಡೆಯುತ್ತದೆ. ನಂತರ ಮದುವಣಿಗರ ಮೆರವಣಿಗೆ ನಡೆಸಿ ಊರ ಮೂಡಣದ ದಿಕ್ಕಿನಲ್ಲಿರುವ ಬಾವಿಯಲ್ಲಿ ಚಂದ್ರಮ್ಮನ ಸಾಗ ಹಾಕಲಾಗುತ್ತದೆ.

ಸ್ಥಳೀಯವಾಗಿ ದೊರೆಯುವ ಕಾಳು, ಸೊಪ್ಪು, ಹಲಸಿನಕಾಯಿ ಪಲ್ಯ, ಪಾಯಸ, ಬೂಂದಿ, ಹೆಸರುಬೇಳೆ, ಚಿತ್ರಾನ್ನ, ಹಪ್ಪಳ, ಅನ್ನ-ಸಾರು ಅಡುಗೆ ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ಸ್ವತಃ ನಿರ್ವಹಿಸಿ, ಗ್ರಾಮಸ್ಥರಿಗೆ ಊಟ ಬಡಿಸಿ, ಫಲತಾಂಬೂಲ ನೀಡಲಾಗುತ್ತದೆ. ಇಡೀ ಗ್ರಾಮಸ್ಥರು ಒಟ್ಟಾಗಿ ಊಟ ಮಾಡುವುದು ವಿಶೇಷ.

ಊರಿನ ಹಿರಿಯ ಮಹಿಳೆ ಸಿದ್ಧಲಿಂಗಜ್ಜಿ ಮಾರ್ಗದರ್ಶನ ನೀಡಿದರು. ‘ಅಲ್ಲಮಪ್ರಭುವಿನ ವಾರ ಬುಧವಾರ’ ಎಂದು ಶರಣರನ್ನು ಆಹ್ವಾನಿಸುವ ಹಾಡುಗಳು ಗ್ರಾಮದಲ್ಲಿ ಭಕ್ತಿ ಮೂಡಿಸಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-17-1089645698

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.